VIRAL VIDEO| ರಸ್ತೆಗಿಳಿದ ಬಾಗಿಲು, ಟೈರ್‌ಗಳಿಲ್ಲದ ವಿಶ್ವದ ಅತ್ಯಂತ ಚಿಕ್ಕ ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವು ಜಗತ್ತಿನ ಅತ್ಯಂತ ಚಿಕ್ಕ ಕಾರನ್ನು ನೋಡಿದ್ದೀರಾ? ಅದೊಂದು ಡೋರ್, ಟೈರ್ ಇಲ್ಲದ ಕಾರು..ಹೌದು ಕೇಳೋಕೆ ಅಲ್ಲ..ನೋಡೊಕೂ ಅಚ್ಚರಿಯಾಗಿದೆ. ರಸ್ತೆಯಲ್ಲಿ ಸಿಯಾನ್ ಕಲರ್ ಕಾರು ಓಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಆಟೋಮೊಬೈಲ್ ಕ್ಷೇತ್ರ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮುನ್ನಡೆಯುತ್ತಿದೆ. ಕಾಲಕಾಲಕ್ಕೆ ಸೊಗಸಾದ ವಿನ್ಯಾಸಗಳು ಮತ್ತು ವೈಶಿಷ್ಟ್ಯಗಳನ್ನು ಪರಿಚಯಿಸಲಾಗುತ್ತಿದೆ. ಇದೇ ರೀತಿ ತಯಾರಾದ ವಿಶ್ವದ ಅತಿ ಚಿಕ್ಕ ಕಾರು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಈ ಕಾರು ಸಾಕಷ್ಟು ಜನರನ್ನು ಆಕರ್ಷಿಸಿದೆ. ಟ್ವಿಟರ್ ಬಳಕೆದಾರ ಮಾಸ್ಸಿಮೊ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಸಿಯಾನ್ ಬಣ್ಣದ ಕಾರು ರಸ್ತೆಯಲ್ಲಿ ಚಲಿಸುತ್ತದೆ. ಇದಕ್ಕೆ ಬಾಗಿಲುಗಳಿಲ್ಲ ಮತ್ತು ಟೈರ್‌ಗಳಿಲ್ಲ. ಆದರೆ, ಈ ಕಾರು ರಸ್ತೆಯಲ್ಲಿ ಸರಾಗವಾಗಿ ಓಡುತ್ತಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಒಡೆದ ಕಾರಿನಂತೆ ಕಾಣುತ್ತಿರುವ ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

‘ಇಂತಹ ಕಾರ್ ನಿಂದ ಏನು ಪ್ರಯೋಜನ’ ಎಂದು ಒಬ್ಬರು ಹೇಳಿದರೆ, ‘ಇದು ಪ್ರಯಾಣಿಕರನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!