ವಿಶ್ವ ದಾಖಲೆಯತ್ತ ದುಬೈ ಹೈಪರ್ ಟವರ್: ಇದು ಅತಿ ದೊಡ್ಡ ವಸತಿ ಕಟ್ಟಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನು ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೊಂದೇ ಅಲ್ಲ ವಿಚಿತ್ರ ಮತ್ತು ಗಮನ ಸೆಳೆಯುವ  ಅನೇಕ ಕಟ್ಟಡಗಳಿಗೆ ದುಬೈ ಕೆರಾಫ್ ಅಡ್ರಸ್‌. ಅಂಥದ್ದೇ ಮತ್ತೊಂದು ಸಾಧನೆ ಮಾಡಲು ದುಬೈ ಸಿದ್ಧತೆ ನಡೆಸಿದೆ. ದುಬೈ ವಿಶ್ವದ ಅತಿ ಎತ್ತರದ ವಸತಿ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದೆ. ಹೈಪರ್ ಟವರ್ ಹೆಸರಿನಲ್ಲಿ 100 ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಇದರ ನಿರ್ಮಾಣದ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ ಎಂದು ನಿರ್ಮಾಣ ಕಂಪನಿಗಳು ಘೋಷಿಸಿವೆ.

ಎಮಿರಾಟಿ ಪ್ರಾಪರ್ಟಿ ಡೆವಲಪ್‌ಮೆಂಟ್ ಕಂಪನಿ ‘ಬಿಂಘಟ್ಟಿ’ ಮತ್ತು ಪ್ರಸಿದ್ಧ ವಾಚ್‌ಮೇಕರ್ ಕಂಪನಿ ‘ಜಾಕೋಬ್ ಅಂಡ್ ಕೋ’ ಜಂಟಿಯಾಗಿ ಈ ಹೈಪರ್ ಟವರ್ ಅನ್ನು ನಿರ್ಮಿಸುತ್ತಿವೆ. ಇದನ್ನು ಬುರ್ಜ್ ಬಿಂಗಟ್ಟಿ ಜಾಕೋಬ್ ಮತ್ತು ಕೋ ರೆಸಿಡೆನ್ಸಿ ಎಂದು ಹೆಸರಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ವಸತಿ ಕಟ್ಟಡ ಮಾತ್ರವಲ್ಲದೆ ವಿಶ್ವದ ಅತ್ಯಂತ ಐಷಾರಾಮಿ ಕಟ್ಟಡವಾಗಿದೆ. ಈ ಕಟ್ಟಡದ ಇನ್ನೊಂದು ವಿಶೇಷವೆಂದರೆ ʻವಜ್ರದ ಆಕಾರʼ. ರಾತ್ರಿಯಲ್ಲಿ ಬೆರಗುಗೊಳಿಸುವ ದೀಪಗಳ ಬೆಳಕಿನಲ್ಲಿ ಬಹಳ ಆಕರ್ಷಕವಾಗಿದೆ. ಇದನ್ನು ಡಬಲ್ ಮತ್ತು ಟ್ರಿಪಲ್ ಬೆಡ್ ರೂಂಗಳೊಂದಿಗೆ ನಿರ್ಮಿಸಲಾಗುವುದು. ಕೊನೆಯ ಮಹಡಿಯಲ್ಲಿ ಅತ್ಯಂತ ಐಷಾರಾಮಿ ಪೆಂಟ್ ಹೌಸ್ ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ಇನ್ನೂ ಹಲವು ವಿಶೇಷತೆಗಳು ಈ ಕಟ್ಟಡದಲ್ಲಿವೆ.

ವಿಶ್ವದ ಅತಿ ಎತ್ತರದ ವಸತಿ ಕಟ್ಟಡವು ಪ್ರಸ್ತುತ ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನಲ್ಲಿರುವ 57 ನೇ ಬೀದಿಯಲ್ಲಿರುವ ಸೆಂಟ್ರಲ್ ಪಾರ್ಕ್ ಟವರ್ ಆಗಿದೆ. ಈ ಕಟ್ಟಡವು 98 ಮಹಡಿಗಳನ್ನು ಹೊಂದಿದೆ. ಈ ಕಟ್ಟಡದ ಎತ್ತರ 472 ಮೀಟರ್. ಆದರೆ ಇದನ್ನು ಹೈಪರ್ ಟವರ್ ಮೀರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!