“ಸಚಿವ ಗೋವಿಂದ ಕಾರಜೋಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ”

ಹೊಸದಿಗಂತ ವರದಿ, ಬಾಗಲಕೋಟೆ:

ಮೌಲ್ಯಾಧಾರಿತ ರಾಜ್ಯಕಾರಣಿಯಾದ ದಿ.ರಾಮಕೃಷ್ಣ ಹೆಗಡೆಯವರ ರಾಜಕೀಯ ಗರಡಿಯಲ್ಲಿ ಪಳಗಿದ ಶರಣ ಸಂಸ್ಕೃತಿ ಹಿನ್ನಲೆಯುಳ್ಳ ಸಚಿವ ಗೋವಿಂದ ಕಾರಜೋಳವರ ಕುರಿತು ಉದ್ದಟತನ ಮಾತನಾಡುವ ನೈತಿಕತೆ ಮಾಜಿ ಶಾಸಕರಾದ ರಾಜು ಅಲಗೂರವರಿಗೆ ಹಾಗೂ ವಿಜಯಾನಂದ‌ ಕಾಶಪ್ಪನವರಿಗೆ ಇಲ್ಲವೆಂದು ರಾಜ್ಯ ಮಾದಿಗ ಮಹಾಸಭಾ ಹಾಗೂ ಬಿಜೆಪಿಯ ಎಸ್ಸಿ ಮೋರ್ಚಾ ಜಂಟಿ ಪದಾಧಿಕಾರಿಗಳು ಟೀಕಿಸಿದರು.

ನವನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ಮಾದಿಗ ಮಹಾಸಭಾ ರಾಜ್ಯ ಅಧ್ಯಕ್ಷ ಹಾಗೂ ಬಿಜೆಪಿ ಎಸ್ಸಿಓರ್ಚಾ ಜಿಲ್ಲಾ ಅಧ್ಯಕ್ಷ ಸತೀಶ ಸೂಳಿಕೇರಿ, ಶೋಷಿತವರ್ಗದ ಸರಳ ಸಜ್ಜನ ರಾಜಕಾರಣಿ ಕಾರಜೋಳವರ ಬಗ್ಗೆ ಮಾತನಾಡಿ ತಮ್ಮ ರಾಜಕೀಯ ಇಮೇಜ್ ಬೆಳೆಸಿಕೊಳ್ಳಲು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜು ಆಲಗೂರವರು ಯಾರಿಂದ ಯಾವ ಸಮುದಾಯದ ರಾಜಕಾರಣಿಗಳಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಲಿತ ಟ್ರಂಪ್ ಕಾರ್ಡ್ ತಾವು ರಾಜಕೀಯವಾಗಿ ಬಳಸಿಕೊಂಡಿದ್ದನ್ನು ಮರೆತಂತಿದೆ. ಅಹಿಂದ್, ಡಿಎಸ್ ಎಸ್ ನ್ನು ರಾಜಕೀಯವಾಗಿ ರಾಜ್ಯದಲ್ಲಿ ಯಾರು ಯಾವ ರಾಜಕಾರಣಿಗಳು ಅತಿ ಹೆಚ್ಚು ದುರ್ಬಳಕೆ ಮಾಡಿಕೊಂಡಿದ್ದಾರೆಂಬುದನ್ನು ಅರಿಯಲಿ ಎಂದು ಸವಾಲು ಹಾಕಿದರು.

ದಲಿತ ಐಕಾನ್ ಹೆಸರಲ್ಲಿ ಇವತ್ತು ಮಾತನಾಡುತ್ತಿರುವ ರಾಜು ಆಲಗೂರವರ ನಡೆ ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಮೂಲ ದಲಿತರ ಅಸ್ಮೀತೆಗೆ ಕೊಳ್ಳಿ ಇಟ್ಟಿದ್ದಲ್ಲದೇ ಎಂ.ಬಿ.ಪಾಟೀಲರ ಪರ ಮಾತನಾಡುತ್ತಿರುವುದು ಯಾವ ಪುರುಶಾರ್ಥಕ್ಕ. ಎಂ‌.ಬಿ.ಪಾಟೀಲರಿಂದ ದಲಿತರ ಮೂಲ ದಲಿತರ ಸ್ವಾಭಿಮಾನಕ್ಕೆ ನಿತ್ಯ ನಿರಂತರ ಧಕ್ಕೆಯಾಗುತ್ತಿರುವುದನ್ನು ಅಲ್ಲಗಳಿಯುವ ತಾಕತ್ತು ರಾಜು ಅಲಗೂರವರಿಗೆ ಇದೆಯೇ ಎಂದು ಪ್ರಶ್ನಿಸಿದರು.

ಸಚಿವ ಕಾರಜೋಳರ ಕುಟುಂಬದ ಸದಸ್ಯರ ಬಗ್ಗೆ ಮಾತನಾಡುವ ಮುನ್ನ ತಮ್ಮ ಕುಟುಂಬದ ನೈತಿಕತೆಯನ್ನು ಸ್ವಲ್ಪ ಸಿಂಹಾಲೋಕನ ಮಾಡಿಕೊಂಡರೆ ಉತ್ತಮ ದಲಿತ ಐಕಾನ್ ಇವತ್ತು ಪರಿಶಿಷ್ಟ ಜಾತಿ ಪಂಗಡದಲ್ಲಿನ ಎಲ್ಲಾ ಶೋಷಿತ ವರ್ಗಗಳ ಸ್ವತ್ತು ಅದನ್ನು ತಮಗೆ ಗುತ್ತಿಗೆ ಪಡೆದವರಂತೆ ತಡೆಯುವ ಅಧಿಕಾರ ಆಲಗೂರವರಿಗೆ ಇಲ್ಲ ಎಂದರು.

ಕಾರಜೋಳವರು ಯಾವತ್ತೂ ದಲಿತ ಸಮುದಾಯವನ್ನು ತಮ್ಮ ರಾಜಕೀಯ ವರ್ಚಸ್ಸಿಗಾಗಿ ಬಳಸಿಕೊಂಡವರಲ್ಲ ಎಂಬುದನ್ನು ಆಲಗೂರವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ಯಾರು ದಲಿತರ ಐಕಾನ್ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂಬುದರ ಕುರಿತು ಬಹಿರಂಗ ಚರ್ಚೆಗೆ ಬರಲು ರಾಜು ಆಲಗೂರ ಅವರಿಗೆ ಮುತ್ತಣ್ಣ ಬೆಣ್ಣೂರ ಸವಾಲು ಹಾಕಿದರು.

ಹನಿ ನೀರಾವರಿಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಈ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು. ಎಂ.ಬಿ.ಪಾಟೀಲರು ಹಾಗೂ ವಿಜಯಾನಂದ ಕಾಶಪ್ಪನವರು ಕಳ್ಳರು ಎಂದು ಜರಿದರು.
ಆನಂದ ಕಳ್ಳಿಮನಿ, ಮಹೇಶ ಮಾದರ, ಕ‌ನಕಪ್ಪ ಪೂಜಾರಿ, ಸದಾಶಿವ ಸನ್ನಕ್ಕಿ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!