ಮುಂಬರುವ ತಿಂಗಳಲ್ಲಿ ಭಾರತದಲ್ಲಿ ಲಾಂಚ್‌ ಆಗಲಿವೆ ಈ ಎಲೆಕ್ಟ್ರಿಕ್‌ ಬೈಕುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಅನೇಕ ಮೆಟ್ರೋ ಸಿಟಿಗಳಿಂದ ಹಿಡಿದು ಸಣ್ಣ ಸಣ್ಣ ಪಟ್ಟಣಗಳಲ್ಲಿ ಈಗಾಗಲೇ ಓಲಾ, ಏಥರ್‌ ಕಂಪನಿಯ ಎಲೆಕ್ಟ್ರಿಕ್‌ ಸ್ಕೂಟಿಗಳು ವಾಹನ ಸವಾರರ ಮೆಚ್ಚುಗೆ ಗಳಿಸಿವೆ. ತಮ್ಮ ದಕ್ಷತೆಯಿಂದ ಅವು ಹೆಚ್ಚು ಬೇಡಿಕೆ ಗಳಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಭಾರತದ ಕೆಲ ಮೊಟಾರು ತಯಾರಕರೂ ಕೂಡ ಎಲೆಕ್ಟ್ರಿಕ್‌ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದು. ಇವುಗಳಲ್ಲಿ ಸ್ಕೂಟಿಯೊಂದೇ ಅಲ್ಲದೇ ಸೂಪರ್‌ ಬೈಕ್‌ ನಂತಿರುವ ದ್ವಿಚಕ್ರವಾಹನಗಳೂ ಹೊರ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ‌ ಕೆಲ ಎಲೆಕ್ಟ್ರಿಕ್ ಬೈಕ್‌ ಗಳ ಕುರಿತಾದ ಮಾಹಿತಿ ಇಲ್ಲಿದೆ.

ರಿವೋಲ್ಟ್‌ ಆರ್‌ವಿ 400
ಈ ಬೈಕ್‌ ಪ್ರಸ್ತುತ ದೆಹಲಿ ಮತ್ತು ಪುಣೆ ನಗರಗಳಲ್ಲಿ ಮಾತ್ರ ಲಭ್ಯವಿದೆ . ಈ ಬೈಕ್ 3,000W ಮೋಟಾರ್‌ನಿಂದ ಚಾಲಿತವಾಗಿದ್ದು ಅದು 170Nm ಪೀಕ್ ಟಾರ್ಕ್ ಮತ್ತು 80 kmph ಗರಿಷ್ಠ ವೇಗವನ್ನು ಉತ್ಪಾದಿಸುತ್ತದೆ. ಇದು 3.23 kWh ಬ್ಯಾಟರಿಯಿಂದ ಚಾಲಿತವಾಗಿದ್ದು, 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ ಮತ್ತು 150 ಕಿ.ಮೀ. ದೂರವನ್ನು ಕ್ರಮಿಸಬಹುದಾಗಿದೆ.

 

ಹೀರೋ ಎಲೆಕ್ಟ್ರಿಕ್ AE-47
ಹೀರೋ ಎಲೆಕ್ಟ್ರಿಕ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕು AE-47 ಬೈಕ್ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಸುಮಾರು ₹1.25 – 1.5 ಲಕ್ಷ ಬೆಲೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.
ಹೀರೋ ಎಲೆಕ್ಟ್ರಿಕ್ AE-47 4,000W ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದ್ದು, 85 kmph ನಷ್ಟು ಗರಿಷ್ಠ ವೇಗವನ್ನು ಹೊಂದಿದೆ. ಇದು 3.5 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಪವರ್ ಮೋಡ್‌ನಲ್ಲಿ 85 ಕಿಮೀ ಮತ್ತು ಇಕೋ ಮೋಡ್‌ನಲ್ಲಿ 160 ಕಿಮೀ ವ್ಯಾಪ್ತಿಯನ್ನು ಹೊಂದಿದೆ. 4 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಟಾರ್ಕ್ T6X
ಕಳೆದ ವರ್ಷ ರತನ್ ಟಾಟಾ ಅವರಿಂದ ಹೂಡಿಕೆಯನ್ನು ಪಡೆದ ಟಾರ್ಕ್ ಮೋಟಾರ್ಸ್ ಪ್ರಸ್ತುತ ಭಾರತೀಯ ಮಾರುಕಟ್ಟೆಗಾಗಿ ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ತಿಂಗಳುಗಳಲ್ಲಿ ಈ ಬೈಕ್ ಬಿಡುಗಡೆಯಾಗುವ ನಿರೀಕ್ಷೆಯಿದೆ.
Tork T6X ಇದು 72Ah ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ. ಇದನ್ನು ಒಂದು ಗಂಟೆಯೊಳಗೆ 80% ವರೆಗೆ ಚಾರ್ಜ್ ಮಾಡಬಹುದಾಗಿದೆ. ಇದು 6kW BLDC ಮೋಟಾರ್‌ನಿಂದ ಚಾಲಿತವಾಗಿದೆ ಎಂದು ವರದಿಯಾಗಿದೆ. ಇದು 27Nm ಟಾರ್ಕ್ ಮತ್ತು 100 kmph ಗರಿಷ್ಠ ವೇಗವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದೇ ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ದೂರದವರೆಗೆ ಬೈಕ್‌ ಚಲಿಸುತ್ತದೆ ಎನ್ನಲಾಗಿದೆ.

ಎವೊಲೆಟ್ ಹಾಕ್
ಎವೊಲೆಟ್, ಗುರುಗ್ರಾಮ್ ಮೂಲದ ಸ್ಟಾರ್ಟ್‌ಅಪ್ ಕಂಪನಿಯು ಈ ಹಾಕ್ ಎಲೆಕ್ಟ್ರಿಕ್ ಬೈಕ್ ಅನ್ನು ಆಟೋ ಎಕ್ಸ್‌ಪೋ 2020 ರಲ್ಲಿ ಪ್ರದರ್ಶಿಸಿದೆ. ಇದು 72-ವೋಲ್ಟ್ ಬ್ಯಾಟರಿಯಿಂದ ಚಾಲಿತವಾಗಿದ್ದು 3 ರಿಂದ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ ಮತ್ತು 100 ಕಿಮೀ ವ್ಯಾಪ್ತಿಯನ್ನು ಹೊಂದಿದೆ ಎಂದು ವರದಿಯಾಗಿದೆ. Evolet Hawk 120 kmph ಗರಿಷ್ಠ ವೇಗವನ್ನು ಹೊಂದಿದೆ ಎಂದು ವರದಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!