ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರು ಅದೆಷ್ಟು ಒಳ್ಳೆ ಕೆಲಸ ಮಾಡಿದರೂ ಒಬ್ಬರು ಮಾಡಿದ್ದು, ಮತ್ತೊಬ್ಬರಿಗೆ ಗೊತ್ತಾಗೋದಿಲ್ಲ. ಈಗ ಇಂತಹ ಸ್ಫೂರ್ತಿದಾಯಕ ವಿಚಾರಗಳನ್ನು ಹಂಚಿಕೊಂಡು ಇತರರಿಗೆ ಪ್ರೇರಣೆ ಕೊಡಲು ಸಾಮಾಜಿಕ ಜಾಲತಾಣವನ್ನು ಹಲವರು ಬಳಸಿಕೊಳ್ಳುತ್ತಾರೆ.
ಇದೀಗ ವೃದ್ಧೆಯ ಮುಖದಲ್ಲಿ ಖುಷಿ, ಕಣ್ಣಿನಲ್ಲಿ ಪ್ರೀತಿಯ ಕಣ್ಣೀರು ಸುರಿದ ಒಂದು ಹೃದಯ ಸ್ಪರ್ಶಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಪ್ರುಬಿಟಿ ಅನ್ನುವ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಮಿಲಿಯನ್ ಗಿಂತ ಹೆಚ್ಚು ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯೊಬ್ಬ ಸ್ಟ್ರಾಬೆರಿ ಮಾರುತ್ತಿದ್ದ ವೃದ್ಧೆಯ ಬಳಿ ಹೋಗಿ, ಹೇಗಿದ್ದೀರಾ ಎಂದು ಕೇಳುವ ಮೂಲಕ ವಿಡಿಯೋ ಆರಂಭವಾಗುತ್ತದೆ.
ಒಂದು ಸ್ಟ್ರಾಬೆರಿ ಪ್ಯಾಕ್ ಬೆಲೆ ಎಷ್ಟು ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಆಕೆ ಉತ್ತರಿಸುತ್ತಾಳೆ. ಅದನ್ನು ಕೇಳಿ ವ್ಯಕ್ತಿ ಎಲ್ಲಾ ಬಾಕ್ಸ್ಗಳನ್ನು ನಾನು ಖರೀದಿ ಮಾಡುತ್ತೇನೆ ಎಂದು ಹಣ ನೀಡುತ್ತಾರೆ.
ಆಕೆ ಸ್ಟ್ರಾಬೆರಿ ಹಣ್ಣುಗಳನ್ನು ಆತನಿಗೆ ನೀಡಲು ಬಂದಾಗ ನೀವೇ ಇಟ್ಟುಕೊಳ್ಳಿ. ಇದರಿಂದ ಇನ್ನು ಹೆಚ್ಚಿನ ಹಣ ಗಳಿಸಿ ಎನ್ನುತ್ತಾರೆ. ಕೊನೆಯಲ್ಲಿ ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಎನ್ನುತ್ತಾರೆ. ಆಗ ಆಕೆಯ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.