Tuesday, February 27, 2024

ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೇ ಬೇಕು, ಇವರದ್ದು ಬರೀ ನಾಟಕ: ಬಿಎಸ್‌ವೈ ವಿರುದ್ಧ ಮಾತನಾಡಿದ ಯತ್ನಾಳ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಅಂತ ಹೇಳ್ತಿದ್ವಿ, ಈಗ ಅದನ್ನು ನಿಕಟಪೂರ್ವ ಅಂತ ಬದಲಾಯಿಸಿದ್ದಾರೆ. ಎಲ್ಲ ಹುದ್ದೆ ಇವರ ಮಕ್ಕಳಿಗೇ ಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇವರದ್ದು ದೊಡ್ಡ ನಾಟಕದ ಕಂಪನಿ, ಎಲ್ಲಿ ಯಾವ ಹುದ್ದೆ ಕಾಣಿಸಿದರೂ ತಮ್ಮ ಮಕ್ಕಳಿಗೇ ಕೊಡಿಸ್ತಾರೆ, ಇನ್ನೂ ಹುದ್ದೆ ಉಳಿದ್ರೆ ಮನೆಯ ಬೆಕ್ಕುಗಳಿಗೂ ಕೊಟ್ಬಿಡಿ ಅಂತಾರೆ ಎಂದು ಕಿಡಿಕಾರಿದ್ದಾರೆ.

ಯಾವ ಹುದ್ದೆ ಖಾಲಿ ಇರಬಾರದು, ಇವರ ಮಕ್ಕಳು ಕುಳಿತಿರಬೇಕು, ರೈತರ ಮುಂದೆ ಕಣ್ಣೀರು ಸುರಿಸೋದೆಲ್ಲ ನಾಟಕ ಎಂದು ಮಾಜಿ ಸಿಎಂ ಬಿಎಸ್‌ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಿಟ್ಟಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!