Wednesday, November 30, 2022

Latest Posts

ದೇವಾಲಯಗಳಿಗೆ ನುಗ್ಗಿದ ಕಳ್ಳರು: ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಾಗ್ರಿ ಕಳವು

ಹೊಸದಿಗಂತ ವರದಿ ಅಂಕೋಲಾ:

ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಾಡು ಹಗಲೇ ಎರಡು ದೇವಾಲಯಗಳಿಗೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯ ಹಣ ಸೇರಿದಂತೆ ಸುಮಾರು ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ಶುಕ್ರವಾರ ಮದ್ಯಾಹ್ನದ ಸಮಯದಲ್ಲಿ ನಡೆದಿದೆ.

ಹೆಗ್ಗಾರ ಗ್ರಾಮದ ಪ್ರಸಿದ್ಧ ಮಹಾಗಣಪತಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಸುಮಾರು 12 ಸಾವಿರ ರೂಪಾಯಿ ಮೌಲ್ಯದ ಹಿತ್ತಾಳೆಯ ದೊಡ್ಡ ಗಂಟೆ, 8 ಸಾವಿರ ರೂಪಾಯಿ ಮೌಲ್ಯದ ಹಿತ್ತಾಳೆಯ ದೀಪದ ಕಂಬ, ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ ಹಿತ್ತಾಳೆ ಮಿಶ್ರಿತ ವಿಗ್ರಹ ಕವಚ ಮತ್ತು ಸ್ಟ್ಯಾಂಡ್ ಹಾಗೂ ಕಾಣಿಕೆ ಡಬ್ಬಿಯಲ್ಲಿರುವ 10 ಸಾವಿರ ಹಣ ಸೇರಿದಂತೆ ಸುಮಾರು 80 ಸಾವಿರ ರೂಪಾಯಿಯ ಸ್ವತ್ತುಗಳನ್ನು ಕಳ್ಳತನ ಮಾಡಿದ್ದು ಈ ಕುರಿತು ಈ ಕುರಿತು ಹೆಗ್ಗಾರ ಪುನರ್ವಸತಿ ಕೇಂದ್ರದ ನಿವಾಸಿ ಅನಂತ ತಮ್ಮಯ್ಯ ಭಟ್ಟ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಅದೇ ರೀತಿ ಶೆವಕಾರದ ಈಶ್ವರ ದೇವಾಲಯದಲ್ಲಿ ಸಹ ಕಳ್ಳತನ ನಡೆಸಿರುವುದಾಗಿ ತಿಳಿದು ಬಂದಿದ್ದು
ಸುಮಾರು 12 ಸಾವಿರ ಮೌಲ್ಯದ ಹಿತ್ತಾಳೆಯ ಘಂಟೆ, 2 ಸಾವಿರ ರೂಪಾಯಿ ಬೆಲೆಯ ತಾಮ್ರದ ಕೊಡ, 4 ಸಾವಿರ ಬೆಲೆಯ ಹಿತ್ತಾಳೆಯ 3 ಕಂಬಗಳು ಮತ್ತು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 20 ಸಾವಿರ ರೂಪಾಯಿ ಸೇರಿದಂತೆ ಸುಮಾರು 38 ಸಾವಿರ ಮೌಲ್ಯದ ಹಣ ಮತ್ತು ಸ್ವತ್ತುಗಳನ್ನು ದೋಚಿದ್ದಾರೆ.
ಈ ಕುರಿತು ದೇವಾಲಯದ ಅರ್ಚಕ ಶೇವ್ಕಾರ ನಿವಾಸಿ ಗಿರೀಶ ಭಟ್ಟ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದು ಎರಡೂ ದೂರುಗಳನ್ನು ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!