ಅನ್ನ ಭಾಗ್ಯ ಅಕ್ಕಿ ಕಳ್ಳ ಮಾರಾಟ ಮಾಡುವಂತಿಲ್ಲ: ಕರ್ನಾಟಕ ಹೈಕೋರ್ಟ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಸಿವು ಮುಕ್ತ ರಾಜ್ಯ ಮಾಡುವ ಗುರಿಯನ್ನಿಟ್ಟುಕೊಂಡು ಸರ್ಕಾರ ಬಡವರಿಗಾಗಿ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಅಕ್ಕಿ ಸೇರಿದಂತೆ ಇತರೆ ಆಹಾರ ಧಾನ್ಯ, ದಾಸ್ತಾನು ಕಳ್ಳಸಾಗಣಿಕೆಯಿಂದ ಇತರರ ಪಾಲಾಗುತ್ತಿದೆ.

ಈ ಬಗ್ಗೆ ಕೋರ್ಟ್‌ ವಿಚಾರಣೆಯ ವೇಳೆ ಮಾತನಾಡಿದ ನ್ಯಾಯಾಧೀಶರು, ಬಡವರ ಅಕ್ಕಿ ಬಡವರಿಗೆ ಸೇರ್ಬೇಕು, ಅನ್ನ ಭಾಗ್ಯ ಅಕ್ಕಿಯನ್ನು ಕಳ್ಳ ಮಾರಾಟ ಮಾಡುವಂತಿಲ್ಲ ಎಂದು ಬಡವರ ಪರವಾಗಿ ಮಾತನಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಕೋರ್ಟ್‌ ಕಲಾಪದ ವೇಳೆ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ಅನ್ನ ಭಾಗ್ಯ ಯೋಜನೆ ಸರ್ಕಾರ ಬಡ ಜನರಿಗಾಗಿ ಮಾಡಿದ್ದು, ಆ ಯೋಜನೆಯಿಂದ ಸಿಗುವ ಅಕ್ಕಿ ಬಡವರಿಗೆಯೇ ಸೇರ್ಬೇಕು, ಅದನ್ನು ಯಾರು ಕೂಡಾ ಕಳ್ಳ ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!