ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಕರಣ್ ಜೋಹರ್‌ಗೆ ಇಬ್ಬರು ಮಕ್ಕಳಿದ್ದಾರೆ. ಇವರು ನನ್ನ ಎರಡನೇ ಮಕ್ಕಳು, ನನ್ನ ಮೊದಲನೇ ಮಗಳು ಬಾಲಿವುಡ್ ನಟಿ ಆಲಿಯಾ ಭಟ್ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಕಾಮಿಡಿ ಶೋ ಒಂದರಲ್ಲಿ ಜಿಗ್ರಾ ಸಿನಿಮಾ ಪ್ರಮೋಷನ್ಸ್‌ಗಾಗಿ ಆಲಿಯಾ ಭಟ್ ಹಾಗೂ ಕರಣ್ ಜೋಹರ್ ಆಗಮಿಸಿದ್ದು, ಈ ವೇಳೆ ಕರಣ್ ಆಲಿಯಾ ನನ್ನ ಮೊದಲನೇ ಮಗಳು ಎಂದು ಹೇಳಿದ್ದಾರೆ.
ಸೆಟ್‌ನಲ್ಲಿ ಆಲಿಯಾರನ್ನು ನೋಡಿದೆ, ಆಡಿಷನ್ ನಂತರ ಅವಳನ್ನು ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾಗೆ ಸೆಲೆಕ್ಟ್ ಮಾಡಿದ್ದೆ. ಆಲಿಯಾ ತುಂಬಾ ಟ್ಯಾಲೆಂಟೆಡ್ ಅವಳನ್ನು ನೋಡಿದ ತಕ್ಷಣ ನನ್ನಲ್ಲಿ ತಂದೆಯತನ ಎದ್ದೇಳಿತು. ಆಕೆ ನನ್ನ ಮೊದಲನೇ ಮಗಳು ಯಾವಾಗಲೂ ನಮ್ಮ ಪ್ರೀತಿ ಹೀಗೆ ಇರುತ್ತದೆ ಎಂದು ಹೇಳಿದ್ದಾರೆ.