November 10, 2026
Tuesday, November 10, 2026
spot_img

ದಿನಭವಿಷ್ಯ | ಇಂದು ನಿಮ್ಮ ಪ್ರಗತಿಗೆ ಇಲ್ಲ ಅಡ್ಡಿ, ಆದರೆ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ

ಮೇಷ
ನಿಮ್ಮ ಪ್ರಗತಿಗೆ ಇಂದು ಯಾವುದೇ ಅಡ್ಡಿ ಬರದು. ಸಂಭ್ರಮದ ಮನಸ್ಥಿತಿ. ಹೊಸ ವ್ಯವಹಾರಕ್ಕೆ ಈಗ ಹಣ ಹೂಡಬೇಡಿ.
ವೃಷಭ
ವಿರೋಧಿಗಳ ಜತೆ ಸಾಮರಸ್ಯ ಬೆಳೆಸಲು ಸಫಲ. ಮೇಲಧಿಕಾರಿಯ ಕೃಪೆ ನಿಮ್ಮ ಮೇಲೆ ಬೀಳಲಿದೆ. ದುಬಾರಿ ವಸ್ತು ಖರೀದಿಯ ಸಾಧ್ಯತೆ.
ಮಿಥುನ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಒಳಿತಾಗಲಿದೆ. ಜಾಗ ಖರೀದಿಗೆ ಹಣ ಹೂಡಬೇಡಿ. ಚರ್ಮದ ಅಲರ್ಜಿ ಉಂಟಾದೀತು. ಕೆಲವರಿಗೆ ಸ್ವಾಸ್ಥ್ಯ ಸಮಸ್ಯೆ.
ಕಟಕ
 ಸಂತೋಷವನ್ನು ಹೊರಗೆ ಹುಡುಕದಿರಿ. ಅದು ನಿಮ್ಮೊಳಗೇ ಇದೆ. ನಿಮ್ಮ ವಿಶ್ವಾಸಕ್ಕೆ ಅರ್ಹರಲ್ಲ ದವರಿಗೆ ಜೋತು ಬೀಳಬೇಡಿ. ಮುಕ್ತರಾಗಿ.
ಸಿಂಹ
ನಿಮ್ಮ ಧೋರಣೆ ಬದಲಿಸಿಕೊಳ್ಳಿ. ನೆಮ್ಮದಿ ತಾನಾಗಿ ಸಿಗುವುದು. ಎಲ್ಲರ ಜತೆ ವಿನಯದ ವರ್ತನೆ ಇರಲಿ. ಸಣ್ಣ ಮಾತಿಗೂ ರೇಗುವುದು ಬಿಡಿ.
ಕನ್ಯಾ
ಕುಟುಂಬ ಸದಸ್ಯರ ಜತೆ ಬೆರೆಯುವ ಅವಕಾಶ. ವೃತ್ತಿಯಲ್ಲಿ ಟೀಕೆ ಕೇಳುವಿರಿ. ಕೆಲಸ ಇನ್ನಷ್ಟು ದಕ್ಷಗೊಳಿಸಿ. ಹಿರಿಯರಿಗೆ ಆರೋಗ್ಯ ಸಮಸ್ಯೆ.
ತುಲಾ
 ವೃತ್ತಿ ಗುರಿ ಸಾಽಸುವಿರಿ. ಸಂಗಾತಿ ಜತೆ ಕ್ಷುಲ್ಲಕ ವಿಷಯಕ್ಕೆ ವಾದ ಮಾಡದಿರಿ. ಆರ್ಥಿಕ ಪರಿಸ್ಥಿತಿ ಏರಿಳಿತ ಕಾಣುವುದು.        
ವೃಶ್ಚಿಕ
ನಿಮ್ಮ ಕಾಳಜಿಗೆ ಅರ್ಹರಲ್ಲದ ವ್ಯಕ್ತಿಯ ಸಂಗ ಬಿಡಿ. ಅವರ ಬಗ್ಗೆ ಅತಿಯಾದ ಚಿಂತೆ ಬೇಡ. ವಿದ್ಯಾರ್ಥಿಗಳ ಚಿತ್ತ ಕೆಡಿಸುವ ಬೆಳವಣಿಗೆ.
ಧನು
ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಸಂತೋಷದ ಮನಸ್ಥಿತಿ. ಆತ್ಮೀಯರ ಜತೆ ಹರ್ಷದ ಕಾಲಕ್ಷೇಪ. ಕೋಪ ನಿಯಂತ್ರಿಸಿದರೆ ಒಳಿತು.
ಮಕರ
 ಯಾರ ಜತೆಗೂ ಇಂದು ಕೆಟ್ಟದಾಗಿ ನಡಕೊಳ್ಳಬೇಡಿ. ನಿಮ್ಮದೇ ನೆಮ್ಮದಿ ಹಾಳಾದೀತು. ಆರ್ಥಿಕ ಲಾಭ ಸೀಮಿತ. ನಿರೀಕ್ಷಿತ ಫಲ ದೊರಕದು.  
ಕುಂಭ
ಈ ದಿನ ಹರ್ಷ ದಿಂದ ಕಳೆಯಲು ಆದ್ಯತೆ ಕೊಡಿ. ಕ್ಷುಲ್ಲಕ ಜಗಳ ಬೇಡ. ವೃತ್ತಿಯ ಜಂಜಾಟ ಇಂದು ಕಡಿಮೆ. ಆತ್ಮೀಯರ ಭೇಟಿ.
 ಮೀನ
ಉದ್ವಿಗ್ನ ಪರಿಸ್ಥಿತಿ ಎದುರಿಸಿದರೂ ಬಳಿಕ ಶಾಂತ. ಸಂಜೆ ವೇಳೆ ಆಪ್ತರ ಭೇಟಿಯಿಂದ ಮನಸ್ಸು ಉಲ್ಲಸಿತ. ವೃತ್ತಿಯಲ್ಲಿ ಬಡ್ತಿ ಸಿಗಲೂಬಹುದು.

Must Read

Skip to toolbar