ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್ ನಟನೆಯ KGF-2 ಸಿನಿಮಾ ನೋಡಿದವ್ರಿಗೆ ಆ ಒಂದು ಸೀನ್ ನೆನಪಿರುತ್ತೆ. ಹೇಗೆ ಕೊನೆಯಲ್ಲಿ ರಾಕಿಭಾಯ್ ಇಡೀ ಹಡಗಿನ ತುಂಬಾ ಚಿನ್ನದೊಂದಿಗೆ ಸಮುದ್ರಕ್ಕೆ ಬೀಳುತ್ತಾನೆ. ಕೊನೆಗೂ ಅಲ್ಲಿಂದ ಚಿನ್ನ ಹೊರತೆಯಲಾಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ.
ಇದೀಗ ಅದೇ ರೀತಿಯ ಘಟನೆಯೊಂದು ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ನಡೆದಿದ್ದು, ಆದ್ರೆ ಇಲ್ಲಿ ಸಮುದ್ರದಕ್ಕೆ ಎಸೆದಿದ್ದ 20 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಹೊತೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಭಾರೀ ಮೌಲ್ಯದ ಚಿನ್ನವನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಇದರ ಮಾಹಿತಿ ಅರಿತ ಅಧಿಕಾರಿಗಳು ಭಾರತೀಯ ಕೋಸ್ಟ್ ಗಾರ್ಡ್ (India Coast Guard) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (Revenue Intelligence) ಜಂಟಿಯಾಗಿ ದಾಳಿ ನಡೆಸಿತ್ತು. ಅಧಿಕಾರಿಗಳನ್ನು ನೋಡಿದ ದೋಣಿಯಲ್ಲಿದ್ದವರು ತಮ್ಮಲ್ಲಿದ್ದ ಒಂದು ಬಾಕ್ಸನ್ನು ಸಮುದ್ರಕ್ಕೆ ಎಸೆದಿದ್ದರು. ಅಧಿಕಾರಿಗಳು ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಎಲ್ಲರೂ ಅಸ್ಪಷ್ಟ ಉತ್ತರ ನೀಡುತ್ತಿದ್ದರು.
ಕೊನೆಗೆ ಸಮುದ್ರಕ್ಕೆ ಎಸೆದ ಬಾಕ್ಸ್ ಪತ್ತೆ ಮಾಡಲು ಸ್ಕೂಬಾ ಡೈವರ್‌ಗಳ ತಂಡ ನಿಯೋಜಿಸಲಾಯಿತು. ಜೊತೆಗೆ ಸ್ಥಳೀಯ ಮೀನುಗಾರರ ಸಹಾಯ ಪಡೆದುಕೊಳ್ಳಲಾಗಿತ್ತು. ಶೋಧ ಕಾರ್ಯ ನಡೆದ 2ನೇ ದಿನ ಸಮುದ್ರದಲ್ಲಿ ಎಸೆಯಲಾಗಿದ್ದ ಬಾಕ್ಸ್ ಪತ್ತೆಯಾಯಿತು.
ಸ್ಕೂಬಾ ಡೈವರ್ಸ್ಗಳು ಬಾಕ್ಸ್ನ್ನು ಮೇಲೆತ್ತಿದರು. ಅದರಲ್ಲಿ 20 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್ ಬಿಸ್ಕೆಟ್ ಅನ್ನು ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.