ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂಥಾ ಅವ್ಯವಸ್ಥೆ: ಫ್ಯಾನ್‌ ಬೇಕಂದ್ರೆ ನೀವೇ ತರಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಉಚಿತ.. ಔಷಧ, ಪರೀಕ್ಷೆ, ಹಾಸಿಗೆ ಎಲ್ಲವನ್ನೊಳಗೊಂಡಂತೆ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದವರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಆಶ್ರಯಿಸುವವರೇ ಹೆಚ್ಚು..ಆದರೆ , ಸೂಕ್ತ ಸೌಲಭ್ಯಗಳಿಲ್ಲದೆ ಈ ಆಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿಯರು ಪರದಾಡುತ್ತಿದ್ದಾರೆ. ಈ ಅವ್ಯವಸ್ಥೆ ಕಂಡುಬಂದಿರುವುದು ನೆರೆಯ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೀಲೇರು ಸಾರ್ವಜನಿಕ ಆಸ್ಪತ್ರೆಯಲ್ಲಿ.

ಈ ಆಸ್ಪತ್ರೆಯ ಹಳೆ ಕಟ್ಟಡದಲ್ಲಿರುವ ಹೆರಿಗೆ ವಾರ್ಡ್ ನಲ್ಲಿ ಎರಡು ಸೀಲಿಂಗ್ ಫ್ಯಾನ್ ಗಳಿವೆ. ಆದರೆ, ಅವು ಹಳೆಯದಾಗಿರುವುದರಿಂದ ಅವುಗಳಿಂದ ಬರುವ ಗಾಳಿಯು ಸಾಕಾಗುವುದಿಲ್ಲ. ಪರಿಣಾಮ..ಬಿಸಿಲು, ಸೆಕೆಯಿಂದಾಗಿ ವಾರ್ಡ್ನ ರೋಗಿಗಳು, ಸಂದರ್ಶಕರು, ಶಿಶುಗಳು ತತ್ತರಿಸಿ ಹೋಗಿದ್ದಾರೆ.

ಈ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ವ್ಯಕ್ತಿಗಳು ಫ್ಯಾನ್ ಗಳನ್ನು ಬಾಡಿಗೆಗೆ ಕೊಡಲು ಶುರು ಮಾಡಿದ್ದಾರೆ. ಪ್ರತಿ ಫ್ಯಾನ್‌ಗೆ 500 ರೂಪಾಯಿ ಡೆಪಾಸಿಟ್‌ ಮಾಡಿ, ದಿನಕ್ಕೆ 50 ರೂಪಾಯಿ ಬಾಡಿಗೆ ಕಟ್ಟಬೇಕು. ಬೇರೆ ದಾರಿಯಿಲ್ಲದೆ ರೋಗಿಗಳು ಇವರ ಮೊರೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆ ವೆಚ್ಚ ಭರಿಸಲಾಗದೆ ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿ ಇಂಥಾ ವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ ಜನ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸಿಲ್ಲ ಎಂದು ರೋಗಿಗಳು ದೂರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!