September 27, 2026
Sunday, September 27, 2026
spot_img

ಹೆಣ್ಮಕ್ಕಳ ಡೆಡಿಕೇಶನ್‌ ಅಂದ್ರೆ ಇದೇನೇ! ಮ್ಯಾಚ್‌ ಹಿಂದಿನ ದಿನ ಸ್ಮೃತಿಗೆ 103 ಡಿಗ್ರಿ ಜ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ಆರ್‌ಸಿಬಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಸ್ಮೃತಿ ಮಂಧಾನಾ ಪಡೆ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಕ್ಯಾಪ್ಟನ್‌ ಸ್ಮೃತಿ ಪರ್ಫಾರ್ಮೆನ್ಸ್‌ ಅದ್ಭುತವಾಗಿದ್ದು, ಅವರ ಡೆಡಿಕೇಷನ್‌ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಸ್ಮೃತಿ ಮಂಧಾನಾ ಮ್ಯಾಚ್‌ ಹಿಂದಿನ ದಿನ 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದರಂತೆ!

ರಡನೇ ಬಾರಿ ಚಾಂಪಿಯನ್‌ ಆದ ಬಳಿಕ ಕೋಚ್‌ ಮಲೋಲನ್ ರಂಗರಾಜನ್ ಆಟಗಾರ್ತಿಯರ ಕೊಡುಗೆಯನ್ನು ಶ್ಲಾಘಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಮತಿ ಮಂದನಾ ಬುಧವಾರ ಸಂಜೆ 103 ಡಿಗ್ರಿ ಜರದಲ್ಲಿ ಬಳಲುತ್ತಿದ್ದರು. ಜ್ವರದಿಂದ ಅಸ್ವಸ್ಥರಾಗಿದ್ದರೂ ಅವರು ಎಲ್ಲಿಯೂ ತೋರಿಸಿಕೊಳ್ಳಲಿಲ್ಲ. ತಂಡದಲ್ಲಿ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ. ಇದು ನಮ್ಮ ಸ್ಮೃತಿ ಎಂದು ಮೆಚ್ಚುಗೆ ಸೂಚಿಸಿದರು.

Must Read