ಜರ್ಮನಿಯ ಕಾಡಿನ ಮಧ್ಯೆ ಇರುವ ಈ ಐಷಾರಾಮಿ ವಿಲ್ಲಾ ಈಗ ಫ್ರೀ ಕೊಡ್ತಿದ್ದಾರೆ ತಗೋತೀರಾ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂಪು ತಂಪು ಕೂಲ್ ಕೂಲ್ ವೆದರ್, ಅತ್ತ ಇತ್ತ ಸುತ್ತಾ ಪ್ರಾಕೃತಿಕ ಸೊಬಗಿನ ನಡುವೆ ಬರೋಬ್ಬರಿ 42 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಐಷಾರಾಮಿ ವಿಲ್ಲಾ ಫ್ರೀ ಕೊಡ್ತಿದ್ದಾರೆ!!

ಹೌದು, ಜರ್ಮನಿಯ ಬೊಗೆನ್ಸೆ ಸರೋವರದ ಬಳಿ ಕಾಡಿನಲ್ಲಿರುವ ಈ ವಿಲ್ಲಾ ಖಾಲಿ ಇದೆ. ಇದನ್ನು ಮಾರಾಟ ಮಾಡಲು ಯತ್ನಿಸಿದರೂ ಮಾರಾಟವಾಗಿಲ್ಲ. ಕೊನೆಗೆ ರಾಜ್ಯ ಸರ್ಕಾರ ಇದನ್ನು ಉಚಿತವಾಗಿ ಕೊಡ್ತೀವಿ ಅಂದ್ರೂ ತಗೊಳ್ಳಲು ಯಾರೂ ಬರುತ್ತಿಲ್ಲ. ಯಾಕೆಂದರೆ ಈ ವಿಲ್ಲಾ ಸರ್ವಾಧಿಕಾರಿ ಹಿಟ್ಲರ್‌ನ ಸಹಚರ ಜೋಸೆಫ್ ಗೋಬೆಲ್ಸ್ ಎಂಬಾತ ವಾಸಮಾಡಿರುವುದು. ಆತ ಇಲ್ಲಿ ಆತ ಲೆಕ್ಕಕ್ಕೆ ಸಿಗದಷ್ಟು ಅನಾಚಾರ ನಡೆಸಿದ್ದಾನೆ.

ಅದೆಷ್ಟೋ ಹತ್ಯೆ ಕೂಡಾ ಇಲ್ಲಿ ನಡೆದಿದೆ. ಹಾಗಾಗಿ ಈ ಮನೆಯೊಳಗೆ ಯಾರೂ ಕೂಡ ಇರಲು ಬಯಸುವುದಿಲ್ಲ. ಜರ್ಮನಿಯಲ್ಲಿ ಇದನ್ನು ಇಂದಿಗೂ ಅಧರ್ಮದ ಗುಹೆ ಎಂದೇ ಇಂದೂ ಕರೆಯಲಾಗುತ್ತಿದೆ. ಹಿಟ್ಲರನ ಮರಣದ ನಂತರ, ಅವನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಅದಾದ ಬಳಿಕ ಎರಡನೇ ಮಹಾಯುದ್ಧದ ನಂತರ ಇದನ್ನು ಮಿಲಿಟರಿ ಆಸ್ಪತ್ರೆಯಾಗಿ ಬಳಸಲಾಯಿತು. ಅನೇಕ ವರ್ಷಗಳಿಂದ ಇದು ಸೋವಿಯತ್ ಒಕ್ಕೂಟದ ಒಡೆತನದಲ್ಲಿದ್ದು, ಈಗ ಬರ್ಲಿನ್ ಸರ್ಕಾರ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ವಿಲ್ಲಾವನ್ನು ಖರೀದಿಸುವವರು ಇದ್ದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ. ಜೊತೆಗೆ ಸರ್ಕಾರದಿಂದ ಇದನ್ನು ಉಚಿತವಾಗಿ ನೀಡಲಿದ್ದೇವೆ ಎಂದೂ ತಿಳಿಸಿದೆ.

ಈ ಮಹಲ್ ನಿರ್ವಹಣೆ ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಿದ್ದು, ಇದನ್ನು ಯಾರೂ ಖರೀದಿಸದಿದ್ದರೆ ಕೆಡವುವುದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಇದರಿಂದ ಸುಮಾರು 55 ಮಿಲಿಯನ್ ಡಾಲರ್ ನಷ್ಟವಾಗಲಿದೆಯಾದರೂ ಸರ್ಕಾರ ಈ ದೃಢ ನಿರ್ಧಾರಕ್ಕೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!