ಹುಡುಗಿ ಕೈಕೊಟ್ಟ ಬಿಸಿಯಲ್ಲಿ ಟೀ ಸ್ಟಾಲ್: ಸುದ್ದಿಯಲ್ಲಿದ್ದಾನೆ ಈ ‘ಎಂ’ ಬೇವಾಫಾ ಚಾಯಿವಾಲಾ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಸಿದ ಹುಡುಗಿ ‘ಕೈ’ಕೊಟ್ಟ ನೋವಲ್ಲಿ ಬದುಕನ್ನೇ ಹಾಳುಮಾಡಿಕೊಳ್ಳುವ ಪಾಗಲ್ ಪ್ರೇಮಿಗಳ ಸ್ಟೋರಿ ಕೇಳಿರುತ್ತೀರಿ. ಆದರೆ ಇಲ್ಲೊಂದು ಡಿಫರೆಂಟ್ ಸ್ಟೋರಿ ಇದೆ ಓದಿ…

ಮಧ್ಯಪ್ರದೇಶದ ರಾಜಗಢ ಮೂಲದ ನಿವಾಸಿ ಅಂತರ್ ಗುಜ್ಜರ್, ಕಳೆದ ಐದು ವರ್ಷದ ಹಿಂದೆ ಸಂಬಂಧಿಕರ ಮದುವೆಯಲ್ಲಿ ಹುಡುಗಿಯೊಬ್ಬಳನ್ನು ಭೇಟಿಯಾಗುತ್ತಾನೆ. ಅದಾದ ಬಳಿಕ ಆಕೆಯೊಂದಿಗೆ ಸ್ನೇಹವಾಗುತ್ತದೆ. ಸ್ನೇಹ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗುತ್ತದೆ. ಎರಡು ವರ್ಷಗಳ ತನಕ ‘ನೀನೆಲ್ಲೋ… ನಾನಲ್ಲೇ…’ ಎಂಬಂತೆ ಮುಂದುವರಿದ ಪ್ರೀತಿ ಒಂದು ಟ್ವಿಸ್ಟ್ ಪಡೆದುಕೊಳ್ಳುತ್ತದೆ. ಗುಜ್ಜರ್‌ಗೆ ಗುಡ್ ಬೈ ಹೇಳಿ ಹುಡುಗಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಮುಗಿಸುತ್ತಾಳೆ. ಬದುಕಿನಲ್ಲಿ ಬರ ಸಿಡಿಲಿನಂತೆ ಬಂದೆರಗಿದ ಈ ಸುದ್ದಿ ಗುಜ್ಜರ್‌ಗೆ ಅರಗಿಸಿಕೊಳ್ಳಲಾಗಲಿಲ್ಲ. ಇನ್ನೇನು ‘ದೇವದಾಸ್’ ಆಗಲು ಹೊರಟ ಗುಜ್ಜರ್‌ಗೆ ಈ ಹೊತ್ತಿನಲ್ಲೇ ಸ್ನೇಹಿತನೊಬ್ಬ ಸಖತ್ ಐಡಿಯಾ ಕೊಡುತ್ತಾನೆ. ಮುಂದಿನ ಕೆಲವೇ ದಿನಗಳಲ್ಲಿ ರಾಜಗಢದಲ್ಲಿ ‘ಬಿಸಿ ಬಿಸಿ’ ಚಹಾ ಕೊಡುವ ಅಂಗಡಿಯೊಂದು ತೆರೆದುಕೊಳ್ಳುತ್ತದೆ.

ಸ್ಟೋರಿ ಇಂಟರೆಸ್ಟಿಂಗ್ ಆಗೋದು ಇಲ್ಲಿಂದ….
ಗುಜ್ಜರ್ ಟೀ ಸ್ಟಾಲ್ ಹೆಸರು ‘ಎಂ ಬೇವಾಫಾ ಚಾಯಿವಾಲಾ’. ಇಲ್ಲಿ ‘ಎಂ’ ಎಂದರೆ ಗುಜ್ಜರ್‌ನ ಪ್ರೇಯಸಿಯ ಹೆಸರಿನ ಮೊದಲ ಅಕ್ಷರ. ಜೋಡಿಗಳಿಗೆ ಇಲ್ಲಿ 10 ರೂ.ಗೆ ಒಂದು ಕಪ್ ಚಹಾ ಸಿಕ್ಕಿದರೆ, ತನ್ನಂತೆ ಪ್ರೀತಿಯಲ್ಲಿ ಮೋಸ ಹೋದವರಿಗೆ ಗುಜ್ಜರ್ ಹಾಫ್ ಡಿಸ್ಕೌಂಟ್‌ನಲ್ಲಿ 5 ರೂ.ಗಳಿಗೆ ಕಪ್ ಮುಂದಿಡುತ್ತಾನೆ!

ಅವಳ ಗಂಡನ ಬಳಿ ಎಲ್ಲವೂ ಇದೆ, ನಾನು ಮಾತ್ರ ಅವಳನ್ನು ನಂಬಿ ನಿರುದ್ಯೋಗಿಯಾಗಿ ಉಳಿದೆ. ಅದೇ ಸಿಟ್ಟಿನಲ್ಲಿ ಆಕೆಯನ್ನು ಅಣಕಿಸಲು ಈ ಚಹಾದಂಗಡಿ ತೆರೆದು ಆಕೆಯ ಹೆಸರನ್ನೇ ಇಟ್ಟಿದ್ದೇನೆ ಎನ್ನುತ್ತಾನೆ ಗುಜ್ಜರ್. ಅಂದಹಾಗೆ ಚಹಾ ಅಂಗಡಿ ಮಾಲೀಕ ಗುಜ್ಜರ್, ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!