ಭಾರತೀಯ ಮೂಲದ ಈ ವ್ಯಕ್ತಿ ಟ್ವಿಟರ್‌ಗೆ ಸಿಇಒ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್‌ನ ಸಿಇಒ ಎಲಾನ್ ಮಸ್ಕ್ ಸೂಕ್ತ ವ್ಯಕ್ತಿ ಸಿಕ್ಕ ತಕ್ಷಣ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

ಇದೀಗ ಭಾರತೀಯ ಮೂಲದ ಮ್ಯಾಸಚೂಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ವಾಂಸ ಡಾ. ಶಿವ ಅಯ್ಯದೊರೆ ಸಿಇಒ ಸ್ಥಾನಕ್ಕೆ ಆಸಕ್ತಿ ಇದೆ, ಹುದ್ದೆ ನಿಭಾಯಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಒಂದು ವೇಳೆ ಎಲಾನ್ ಹೇಳಿದ್ದು ನಿಜವೇ ಆಗಿದ್ದು, ಸ್ಥಾನ ಬಿಟ್ಟುಕೊಟ್ಟರೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮತ್ತೆ ಟ್ವಿಟರ್ ಸಿಇಒ ಹುದ್ದೆ ಅಲಂಕರಿಸಬಹುದಾಗಿದೆ.

He says he invented e-mail. Dispute him at your own risk. - The Boston Globeಎಲಾನ್ ಮಸ್ಕ್, ನನಗೆ ಟ್ವಿಟರ್ ಸಿಇಒ ಆಗಲು ಆಸಕ್ತಿ ಇದೆ. ಎಮ್‌ಐಟಿಯಿಂದ ನಾಲ್ಕು ಡಿಗ್ರಿಗಳಿವೆ, ಏಳು ಕಂಪನಿಗಳನ್ನು ನಿಭಾಯಿಸಿಸಿದ ಅನುಭವ ಇದೆ. ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ ಹೇಳಿ ಎಂದು ಅಯ್ಯದೊರೆ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!