ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುವೆ: ವಾಟಾಳ್ ನಾಗರಾಜ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾನು ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ನಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ.ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಹಣ, ಜಾತಿ, ಧರ್ಮ ನೋಡಿ ಓಟು ಹಾಕಬೇಡಿ, ನನಗೆ ನನ್ನ ಕೆಲಸ ನೋಡಿ ವೋಟು ಕೊಡಿ, ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!