ಪಂಜಾಬ್‌ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ-ಭಗವಂತ್‌ ಮಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬಂಧನಕ್ಕೆ ನಡೆಯುತ್ತಿರುವ ವಿಚಾರಗಳ ನಡುವೆ, ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಮಂಗಳವಾರ ಹೇಳಿದ್ದಾರೆ.
ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಸಿಎಂ ಮಾನ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ವಿದೇಶಿ ಶಕ್ತಿಗಳ ಸಹಾಯದಿಂದ ಪಂಜಾಬ್‌ನ ಪರಿಸರವನ್ನು ಹಾಳುಮಾಡಲು ಯತ್ನಿಸಿದ್ದು, ದ್ವೇಷಪೂರಿತ ಭಾಷಣಗಳನ್ನು ನೀಡುತ್ತಿವೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗಿದದ್ದು, ಅವರನ್ನು ಬಂಧಿಸಲಾಗಿದೆ ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು”, ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.

“ಈ ಕಾರ್ಯಾಚರಣೆಯ ಸಮಯದಲ್ಲಿ, ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಉತ್ತಮವಾಗಿದೆ ಮತ್ತು ಒಂದು ಕಲ್ಲು ಕೂಡ ಕದಲಲಿಲ್ಲ. ನನಗೆ ಪಂಜಾಬ್‌ನ ಅನೇಕ ಜನರಿಂದ ಕರೆಗಳು ಬಂದವು, ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಪ್ರಶಂಸೆಯ ಮಾತುಗಳು ಬಂದಿವೆ. ನಮ್ಮ ಮಕ್ಕಳಿಗೆ ಪುಸ್ತಕಗಳು ಬೇಕು, ಶಸ್ತ್ರಾಸ್ತ್ರಗಳಲ್ಲ, ಪಂಜಾಬ್ ಯಾವಾಗಲೂ ದೇಶವನ್ನು ಮುನ್ನಡೆಸಿದೆ ಮತ್ತು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ” ಎಂದರು.

“ರಾಜ್ಯದ ಉಳಿದ ಎಲ್ಲಾ ಪ್ರದೇಶಗಳಲ್ಲಿ (ತರನ್ ತರಣ್, ಫಿರೋಜ್‌ಪುರ, ಮೊಗಾ, ಸಂಗ್ರೂರ್, ಉಪವಿಭಾಗ ಅಜ್ನಾಲಾ, ಮೊಹಾಲಿಯ ವೈಪಿಎಸ್ ನಗರ ಮತ್ತು ವಿಮಾನ ನಿಲ್ದಾಣ ರಸ್ತೆಯ ಪಕ್ಕದ ಪ್ರದೇಶಗಳನ್ನು ಹೊರತುಪಡಿಸಿ) ಇಂದು ಮಧ್ಯಾಹ್ನ 12.00 ರಿಂದ ಮೊಬೈಲ್ ಇಂಟರ್ನೆಟ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳು, ಆಸ್ಪತ್ರೆ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳಿಗೆ ಅಡ್ಡಿಯಾಗದಂತೆ ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!