ಕಾಸರಗೋಡು ನಗರಸಭೆಗೆ ಬಂತು ಸಾವಿರ ಊಟದ ಪ್ಲೇಟ್, ಗ್ಲಾಸ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಲ್ಲಿ ಕಾಸರಗೋಡು ನಗರಸಭೆ ಇನ್ನೊಂದು ಹೆಜ್ಜೆ ಮುಂದಿರಿಸಿದೆ.
ಜನರಿಗೆ ಕೈಗೆಟಕುವ ರೀತಿಯಲ್ಲಿ ಸ್ಟೀಲ್ ಲೋಟ, ಪ್ಲೇಟ್ ಬಾಡಿಗೆಗೆ ನೀಡಲು ಮುಂದಾಗಿರುವ ನಗರಸಭೆ, ಇದಕ್ಕಾಗಿ ನಗರಸಭಾ ಕುಟುಂಬಶ್ರೀ ಘಟಕದ ನೇತೃತ್ವದಲ್ಲಿ ಒಂದು ಸಾವಿರ ಊಟದ ಪ್ಲೇಟ್ ಹಾಗೂ ಗ್ಲಾಸ್‌ಗಳನ್ನು ಖರೀದಿಸಿ ಸಣ್ಣ ಮೊತ್ತದ ಬಾಡಿಗೆಗೆ ಜನರಿಗೆ ತಲುಪಿಸಲು ಯೋಜನೆ ರೂಪಿಸಿದೆ.

ಮದುವೆ, ಗೃಹಪ್ರವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲೇಟ್, ಗ್ಲಾಸ್ ಇತ್ಯಾದಿಗಳನ್ನು ಪ್ರತೀ ಸಂದರ್ಭದಲ್ಲೂ ಆಹಾರ ಸೇವಿಸಲು ಬಳಸಲಾಗುತ್ತಿದ್ದು, ನಂತರ ಅವುಗಳನ್ನು ಎಸೆಯಲಾಗುತ್ತದೆ. ಇದರಿಂದ ವ್ಯಾಪಕ ಪರಿಸರ ಹಾನಿಗೆ ಕಾರಣವಾಗುತ್ತಿದ್ದು ಸಮಸ್ಯೆಗೆ ಪರಿಹಾರವಾಗಿ ನಗರಸಭೆಯು ಈ ಯೋಜನೆ ಹಮ್ಮಿಕೊಂಡಿದೆ. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿರುವ ಈ ಸಂದರ್ಭ ನಗರಸಭೆ ವ್ಯಾಪ್ತಿಯ ಜನರಿಗೆ ಇದು ತುಂಬಾ ಉಪಯುಕ್ತವಾಗಲಿದೆ ಎಂದು
ನಗರಸಭಾ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!