Monday, September 26, 2022

Latest Posts

ಧಾರ್ಮಿಕ ಭಾವನೆಗೆ ಧಕ್ಕೆ: ಬಾಲಿವುಡ್ ನಟ ಅಜಯ್ ದೇವಗನ್ ಗೆ ತಟ್ಟಿತು ಬಾಯ್ಕಾಟ್ ಬಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​ ಚಲನಚಿತ್ರಗಳಿಗೆ ಒಂದರ ಮೇಲೆ ಒಂದರಂತೆ ಬಾಯ್ಕಾಟ್ ಎದುರಾಗುತ್ತಿದ್ದು, ಇದೀಗ ನಟ ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಚಲಚಿತ್ರದ ಬಹಿಷ್ಕಾರಕ್ಕೆ ಬಿಸಿ ಮುಟ್ಟಿದೆ.

ಸಾಮಾಜಿಕ ಜಾಲತಾಣಗಳು ಮಾತ್ರವಲ್ಲದೇ ಅಜಯ್ ದೇವಗನ್ ನಟನೆಯ ಚಲನಚಿತ್ರದ ವಿರುದ್ಧ ಕೆಲವೆಡೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಥ್ಯಾಂಕ್ ಗಾಡ್ ಚಿತ್ರದ ವಿರುದ್ಧ ಉತ್ತರ ಪ್ರದೇಶದ ಸೋನಭದ್ರದ ಓಬ್ರಾ ನಗರ ಪಂಚಾಯತ್‌ ಸದಸ್ಯ ಮತ್ತು ರಾಹುಲ್ ಶ್ರೀವಾಸ್ತವ ನೇತೃತ್ವದಲ್ಲಿ ಓಬ್ರಾದ ಚಿತ್ರಗುಪ್ತ ಭಗವಾನ್ ದೇವಸ್ಥಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನಟ ಅಜಯ್ ದೇವಗನ್ ಅವರ ಪ್ರತಿಕೃತಿ ದಹನ ಮಾಡಲಾಯಿತು.

ಭಗವಾನ್ ಚಿತ್ರಗುಪ್ತನನ್ನು ಕುರಿತು ಥ್ಯಾಂಕ್ ಗಾಡ್ ಚಿತ್ರದಲ್ಲಿ ತೋರಿಸಿರುವ ಕಥೆಯು ಅವಹೇಳನಕಾರಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಜಯ್ ದೇವಗನ್ ಅವರನ್ನು ಚಿತ್ರಗುಪ್ತನ ಪಾತ್ರದಲ್ಲಿ ತೋರಿಸಿರುವುದಕ್ಕೆ ಟ್ವಿಟರ್‌ನಲ್ಲಿ ಕೂಡ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಥ್ಯಾಂಕ್ ಗಾಡ್ ಚಿತ್ರದ ಟ್ರೈಲರ್ ಅನ್ನು 8 ಸೆಪ್ಟೆಂಬರ್ 2022 ರಂದು ಬಿಡುಗಡೆ ಮಾಡಲಾಗಿದೆ. ಈ ಚಿತ್ರ ದೀಪಾವಳಿಯಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಭಗವಾನ್ ಚಿತ್ರಗುಪ್ತನ ಪಾತ್ರದಲ್ಲಿದ್ದು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೂ ಮೊದಲು ಬ್ರಹ್ಮಾಸ್ತ್ರ ಮತ್ತು ಲಾಲ್ ಸಿಂಗ್ ಚಡ್ಡಾದಂತಹ ಭಾರೀ ಬಜೆಟ್ ಚಿತ್ರಗಳ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!