October 15, 2026
Thursday, October 15, 2026
spot_img

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ: ಜಾಮೀನಿಗಾಗಿ ‘ಸುಪ್ರೀಂ’ ಮೊರೆಹೋದ ನಟ ದರ್ಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ಜೈಲಿನಲ್ಲಿ ಅನುಭವಿಸುವ ಕಷ್ಟಗಳ ಕುರಿತು ಸುದೀರ್ಘ ಅಳಲು ತೋಡಿಕೊಂಡಿದ್ದಾರೆ.

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ ಹಾಕಲಾಗುತ್ತಿದೆ. ನಿಯಮ ಮೀರಿ ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದೇನೆ ಎಂದು ಕಷ್ಟ ಹೇಳಿಕೊಂಡಿದ್ದಾರೆ.

ಜೈಲಿನಲ್ಲಿ ಒಂದೇ ರೀತಿಯ ಸಂಕಷ್ಟ ಎದುರಾದರೆ, ಅತ್ತ ಮಾಧ್ಯಮದಲ್ಲಿ ಕೂಡ ಅಪಪ್ರಚಾರವಾಗುತ್ತಿದೆ. ಜೈಲಿನಲ್ಲಿ ಇತರೆ ಕೈದಿಗಳಿಗಿಂತ ತಾರತಮ್ಯ ಮಾಡಲಾಗುತ್ತಿದೆ. ಸರಿಯಾದ ಆಹಾರ, ಬಟ್ಟೆಗಳು ಪಡೆಯಲೂ ಬಿಡುತ್ತಿಲ್ಲ. ಕೇವಲ ಜೈಲು ಸೆಲ್​ನ ಕಾರಿಡಾರ್​​ನಲ್ಲಿ ಮಾತ್ರ ವಾಕ್ ಮಾಡಲು ಬಿಡುತ್ತಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ವರ್ಷಕ್ಕೆ ಎರಡು, ಮೂರು ಸಿನಿಮಾ ಮಾಡುತ್ತಿದೆ. ಆದರೆ ಜೈಲು ಸೇರಿದ ಬಳಿಕ ಜೀವನೋಪಾಯಕ್ಕೂ ಸಮಸ್ಯೆ ಆಗಿದೆ. ಈಗಾಗಲೇ ಸಹಿ ಹಾಕಿರುವ ಸಿನಿಮಾಗಳು ಅರ್ಧಕ್ಕೆ ನಿಂತಿದೆ. ನಿರ್ಮಾಪಕರು ಬಂಡವಾಳ ಹೂಡಿ ಕಂಗಾಲಾಗಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ಕೋರಿದ್ದಾರೆ.

ಸುಪ್ರೀಂಕೋರ್ಟ್​​ನಲ್ಲಿ ನಾಳೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಬಾರಿ ಜಾಮೀನು ಸಿಗುತ್ತಾ, ಇಲ್ಲವೇ ಎಂಬುವುದು ಕುತೂಹಲ ಹೆಚ್ಚಾಗಿದೆ.

Must Read