September 13, 2026
Sunday, September 13, 2026
spot_img

ಮೂರು ದಿನ, 15 ದ್ವಿಪಕ್ಷೀಯ ಸಭೆ: BRICS ಶೃಂಗಸಭೆಯಲ್ಲಿ ಮೋದಿ ಏನೆಲ್ಲಾ ಮಾಡಿದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆತಿಥ್ಯದಲ್ಲಿ ನಡೆದ 18ನೇ BRICS ಶೃಂಗಸಭೆ ಹಲವು ಕಾರಣಗಳಿಂದ ಜಾಗತಿಕವಾಗಿ ಗಮನ ಸೆಳೆದಿದೆ.

ವಿಶ್ವದ ಪ್ರಮುಖ ನಾಯಕರ ಭೇಟಿಯಿಂದ ಹಿಡಿದು ಮಹತ್ವದ ದ್ವಿಪಕ್ಷೀಯ ಮಾತುಕತೆಗಳವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಭರ್ಜರಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಿದ್ರೆ BRICS ಶೃಂಗಸಭೆಯಲ್ಲಿ ಏನೆಲ್ಲಾ ಆಯ್ತು? ಮೋದಿ ಅವರು ಯಾವೆಲ್ಲಾ ನಾಯಕರನ್ನು ಭೇಟಿಯಾದ್ರು? ಎಷ್ಟು ದ್ವಿಪಕ್ಷೀಯ ಸಭೆಗಳು ನಡೆದವು? ಈ ಮೂರು ದಿನಗಳಲ್ಲಿನ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮೊದಲ ದಿನ ಪುಟಿನ್, ಪೆಜೆಶ್ಕಿಯನ್ ಜತೆ ಮಾತುಕತೆ

ಸೆಪ್ಟೆಂಬರ್ 11ರಂದು ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ರಕ್ಷಣಾ, ಇಂಧನ, ವ್ಯಾಪಾರ, ಮೂಲಸೌಕರ್ಯ, ನಾಗರಿಕ ಪರಮಾಣು ಇಂಧನ, ನಿರ್ಣಾಯಕ ಖನಿಜಗಳು ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ಚರ್ಚೆ ನಡೆಯಿತು.

ರಷ್ಯಾ-ಉಕ್ರೇನ್ ಮತ್ತು ಅಮೆರಿಕ-ಇರಾನ್ ಸಂಘರ್ಷಗಳ ಬಗ್ಗೆಯೂ ಮಾತುಕತೆ ನಡೆದಿದ್ದು, ಎಲ್ಲ ಸಂಘರ್ಷಗಳಿಗೂ ರಾಜತಾಂತ್ರಿಕತೆ ಮತ್ತು ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಮೋದಿ ಪುನರುಚ್ಚರಿಸಿದರು. ಇದೇ ದಿನ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹಾಗೂ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನೂ ಮೋದಿ ಭೇಟಿಯಾದರು.

ಇದನ್ನೂ ಓದಿ:

ಎರಡನೇ ದಿನ ಷಿ ಜಿನ್‌ಪಿಂಗ್ ಭೇಟಿ

ಸೆಪ್ಟೆಂಬರ್ 12ರಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಯುಎಇ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಹಾಗೂ ವಿಯೆಟ್ನಾಂ ನಾಯಕ ಲೆ ಮಿನ್ ಹುಂಗ್ ಅವರೊಂದಿಗೆ ಮಾತುಕತೆ ನಡೆಸಿದ್ರು.

ಏಳು ವರ್ಷಗಳ ಬಳಿಕ ಷಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದರಿಂದ ಮೋದಿ-ಷಿ ಭೇಟಿಗೆ ವಿಶೇಷ ಮಹತ್ವ ದೊರೆಯಿತು. ಗಡಿ ವಿವಾದಗಳನ್ನು ಸಂವಾದದ ಮೂಲಕ ಬಗೆಹರಿಸಿ, LACನಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಮೂರನೇ ದಿನ ಹಲವು ರಾಷ್ಟ್ರಗಳ ನಾಯಕರ ಜೊತೆ ಸಭೆ

ಸೆಪ್ಟೆಂಬರ್ 13ರಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್, ಉಗಾಂಡಾ ಉಪಾಧ್ಯಕ್ಷೆ ಜೆಸ್ಸಿಕಾ ಅಲುಪೊ ಸೇರಿದಂತೆ ಹಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !