ರಸ್ತೆಯಲ್ಲಿ ಮರಿಯಾನೆ ಸಹಿತ ಮೂರು ಆನೆಗಳ ಸಂಚಾರ: ಸವಾರರಿಗೆ ಆತಂಕ

ಹೊಸದಿಗಂತ ವರದಿ,ಮುoಡಗೋಡ:

ತಾಲೂಕಿನ ಸುಳ್ಳಳ್ಳಿ ಗ್ರಾಮದ ಹತ್ತಿರದ ಅರಣ್ಯದ ಪಕ್ಕದಲ್ಲಿ, ರಸ್ತೆಗಳಲ್ಲಿ ಕಾಡಾನೆಗಳ ಹಿಂಡು ಸಂಚಾರ ನಡೆಸುತ್ತಿದ್ದು ಗ್ರಾಮಸ್ಥರಿಗೆ ಹಾಗೂ ವಾಹನ ಸವಾರರಿಗೆ ಆತಂಕವನ್ನುoಟು ಮಾಡಿದೆ.
ಸುಳ್ಳಳ್ಳಿ, ಬಸನಕೊಪ್ಪ, ಕವಲಗಿ ಹಾಗೂ ಕ್ಯಾತನಳ್ಳಿ ಗ್ರಾಮಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ರಸ್ತೆಯ ಮೇಲೆ ಒಂದು ಮರಿಯಾನೆ ಸೇರಿದಂತೆ ಮೂರು ಆನೆಗಳು ಸಂಚಾರ ನಡೆಸಿದ್ದು ಸಾರ್ವಜನಿಕರು ಈ ಮಾರ್ಗವಾಗಿ ಓಡಾಡುವುದನ್ನೆ ನಿಲ್ಲಿಸಬೇಕು ಎಂದು ಮಾತನಾಡುತ್ತಿರುವುದು ಕಂಡು ಬಂದಿತು. ದಟ್ಟವಾದ ಅರಣ್ಯದಲ್ಲಿರುವ ಈ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಕುಟುಂಬಗಳೆ ವಾಸಿಸುತ್ತಿದ್ದು ಈ ಗ್ರಾಮದಲ್ಲಿ ಗದ್ದೆಗಳಲ್ಲಿ ಅರ್ದದಷ್ಟು ಬೆಳೆಗಳನ್ನು ಕಟಾವು ಮಾಡಿದ್ದಾರೆ. ಇನ್ನೂ ಕೆಲವು ರೈತರು ಗದ್ದೆಗಳಲ್ಲಿ ಬೆಳೆಗಳನ್ನು ಕಟಾವು ಮಾಡದೆ ಹಾಗೆ ಇರಿಸಿರುವುದರಿಂದ ಎಲ್ಲಿ ಗದ್ದೆಗೆ ನುಗ್ಗಿ ಬೆಳೆಹಾನಿ ಮಾಡುತ್ತವೆಯೊ ಎಂದು ಭಯದ ವಾತಾವರಣದಲ್ಲಿದ್ದಾರೆ. ಈ ಗ್ರಾಮಗಳಲ್ಲಿ ಅಡಿಕೆ ತೋಟಗಳ ಸಂಖ್ಯೆಯು ಅಧಿಕವಾಗಿದ್ದು ತೋಟಗಳಿಗೆ ನುಗ್ಗಿ ಎಲ್ಲಿ ಬೆಳೆಹಾನಿ ಮಾಡುತ್ತವೆಯೋ ಎಂಬ ಭಯವು ಈ ಭಾಗದ ರೈತರಲ್ಲಿ ಕಾಡುತ್ತಿದೆ. ಮೊದಲೆ ಎರಡು ವರ್ಷದಿಂದ ಕೋವಿಡ್ ನಿಂದ ಬೆಳೆದ ಬೆಳೆಗೆ ಬೆಲೆ ಸಿಕ್ಕಿಲ್ಲಾ ಅಕಾಲಿಕ ಮಳೆಯಿಂದ ಹಾನಿ ಅನುಭವಿಸಿದ್ದೆವೆ ಈ ವರ್ಷ ನೋಡಿದರೆ ಆನೆಗಳ ಹಾವಳಿ ಹೆಚ್ಚಾಗಿದೆ ಎಂದು ಸ್ಥಳಿಯ ಪ್ರತ್ಯಕ್ಷದರ್ಶಿ ರೈತ ರಾಕೇಶ್ ಗೊಂದಕರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!