UPSC​ ಪರೀಕ್ಷಾರ್ಥಿಗಳ ಗಮನಕ್ಕೆ: ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತೆ ಎಕ್ಸಾಮ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಲೋಕಸೇವಾ ಆಯೋಗದ 2021 ನೇ ಸಾಲಿನ ಮುಖ್ಯ ಪರೀಕ್ಷೆಯು ನಿಗದಿ ಪಡಿಸಿದ ವೇಳಾಪಟ್ಟಿಯಂತೆ ಇದೇ ಜನವರಿ 7 ಶುಕ್ರವಾರದಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪರೀಕ್ಷೆ ಕುರಿತ ಗೊಂದಲಗಳಿಗೆ ತೆರೆ ಎಳೆದಿದೆ.
ದೇಶದಲ್ಲಿ ಕೊರೋನಾ, ಒಮಿಕ್ರಾನ್​ ಭೀತಿಯಿಂದ ಶಾಲಾ-ಕಾಲೇಜು ಪರೀಕ್ಷೆಗಳು ಮುಂದೂಡಲಾಗುತ್ತಿದೆ. ಆದರೆ ಯುಪಿಎಸ್​ ಪರೀಕ್ಷೆಗಳು ಮುಂದೂಡಿಕೆ ಆಗಲ್ಲ, ನಿಗದಿತ ವೇಳಾಪಟ್ಟಿಯಂತೆಯೇ ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.
ಈ ವೇಳೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಆಯೋಗ ಸೂಚಿಸಿದೆ. ಜೊತೆಗೆ ಕರ್ಫ್ಯೂ ಜಾರಿಯಾದ ರಾಜ್ಯಗಳಲ್ಲಿ ಅಭ್ಯರ್ಥಿಗಳ ಇ-ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ಕಾರ್ಯನಿರ್ವಾಹಕರ ಪಾಸ್​ಗಳನ್ನು ಸಂಚಾರಕ್ಕೆ ಅನುಮತಿಸಬೇಕು ಎಂದು ಕೋರಿದೆ.
ಜನವರಿ 7, 8, 9, 15, 16 ರಂದು ವಿವಿಧೆಡೆ ಮುಖ್ಯ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!