ಹೊಸದಿಗಂತ ವರದಿ,ವಿಜಯನಗರ:
ಕೇಂದ್ರ ಉಕ್ಕು ಖಾತೆ ಸಚಿವರಾದ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಬುಧವಾರ ಸಂಜೆ ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಯ ಶತ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಂತರ ದೇವಾಲಯದಲ್ಲಿನ ಶಿಲ್ಪ ರಚನೆಯನ್ನು ವೀಕ್ಷಿಸಿದರು. ಈ ವೇಳೆ ದೇಗುಲದ ಆನೆ ಲಕ್ಷ್ಮೀ ಸಾಂಪ್ರದಾಯಿಕವಾಗಿ ಕೇಂದ್ರ ಸಚಿವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿತು.
ಮೂರು ದಿನಗಳ ಕಾಲ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಓ.ಪಿ.ಜಿಂದಾಲ್ ಮೆಮೋರಿಯಲ್, ಬಳಿಕ ಕಲಾಧಾಮ ಮತ್ತು ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ.
ಜಿಂದಾಲ್ ನಲ್ಲಿ ಅಧಿಕಾರಿಗಳ ಜೊತೆ ಸಭೆ, ಉಕ್ಕು ಘಟಕ, ಕ್ರೀಡಾ ಸಮುಚ್ಚಯದ ವೀಕ್ಷಣೆ ಮಾಡಲಿದ್ದಾರೆ. ನಂತರ ದೋಣಿಮಲೈನ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ ಎಂಡಿಸಿ) ಗೆ ಭೇಟಿ ನೀಡಿ, ಅಲ್ಲಿ ನಡೆಯಲಿರುವ ಎರಡನೇ ಸ್ಕ್ರೀನಿಂಗ್ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ನಂತರ ಎನ್ ಎಂಡಿಸಿ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಯೋಜನಾ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಕುಮಾರಸ್ವಾಮಿ ಗಣಿ ಪ್ರದೇಶ, ಪಲೆಟ್ ಉತ್ಪಾದನೆಯ ಘಟಕ, ಪಲೆಟ್ ಲೋಡಿಂಗ್ ಘಟಕವನ್ನು ವೀಕ್ಷಿಸಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.