Thursday, July 7, 2022

Latest Posts

ಅಮೆರಿಕದ ಹೆದ್ದಾರಿಯಲ್ಲಿ ಹಿಮಪಾತ, ದಟ್ಟ ಮಂಜಿಗೆ ಭೀಕರ ಸರಣಿ ಅಪಘಾತ: ಮೂವರ ಸಾವು, 20 ಮಂದಿಗೆ ಗಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಹಿಮಪಾತ ಹಾಗೂ ದಟ್ಟ ಮಂಜಿನಿಂದಾಗಿ 50ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತವಾಗಿದ್ದು,ದುರಂತದಲ್ಲಿ ಮೂವರು ಸಾವನ್ನಪ್ಪಿದರೆ, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಅಪಘಾತದ ವೇಳೆ ಕೆಲ ವಾಹನಗಳು ಸುಟ್ಟುಹೋಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ.
ಫಿಲಡೆಲ್ಫಿಯಾದಿಂದ ವಾಯವ್ಯಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಮೈನರ್ಸ್‌ವಿಲ್ಲೆ ಬಳಿ ಸೋಮವಾರ ಬೆಳಗ್ಗೆ 10:30ರ ಸಮಯದಲ್ಲಿ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೌಂಟಿಯ ತುರ್ತು ನಿರ್ವಹಣಾ ಕಚೇರಿಯ ಜಾನ್ ಬ್ಲಿಕ್ಲೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತದ ದೃಶ್ಯಗಳು ವೈರಲ್‌ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss