Saturday, February 4, 2023

Latest Posts

ಕಲಬುರಗಿಯಲ್ಲಿ ಹುಲಿಬೇಟೆ ಚಿತ್ರದ ಪೋಸ್ಟರ್ ಬಿಡುಗಡೆ

ಹೊಸದಿಗಂತ ವರದಿ , ಕಲಬುರಗಿ:

ಬಿಜೆಪಿ ಯುವ ಮುಖಂಡ ಮಣಿಕಂಠ ರಾಠೋಡ ಅವರು ನಾಳೆ ಜ.6ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಹುಲಿಬೇಟೆ ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಗರದ ಎಮ್.ಆರ್.ಮಾಟ್೯ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ,ಮಾತನಾಡಿದ ಅವರು,ಉತ್ತರ ಕರ್ನಾಟಕದ ಹಾಗೂ ಕಲ್ಯಾಣ ಕನಾ೯ಟಕ ಭಾಗದ ಕಥೆಯಾಧಾರಿತ ಚಲನಚಿತ್ರ ಇದಾಗಿದ್ದು,ನಾಡಿನ ಎಲ್ಲಾ ಸಿನಿಪ್ರೀಯರು ಚಿತ್ರವನ್ನು ವಿಕ್ಷೀಸಿ ಪ್ರೋತ್ಸಾಹಿಸಬೇಕೆ ಎಂದು ಮನವಿ ಮಾಡಿದರು.

ಕಲ್ಯಾಣ ಕನಾ೯ಟಕದ ಹಲವು ಪ್ರತಿಭೆಗಳು ಒಗ್ಗೂಡಿ ಈ ಚಲನಚಿತ್ರ ಸಿದ್ದಪಡಿಸಿದ್ದು,ನಾಳೆ ದಿನಾಂಕ ಜ. 06 ರಂದು ಬಿಡುಗಡೆ ಆಗಲಿದೆ. ರಾಜ ಬಹದ್ದೂರ್ ನಿದೇ೯ಶನದ ಚಿತ್ರದಲ್ಲಿ ವಿಶ್ವ ನಾಯಕ ನಟರಾಗಿ ಪಾತ್ರ ಮಾಡುತ್ತಿದ್ದು, ಛಾಯಾ ಗ್ರಾಹಕ ಧನಪಾಲ್ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಟ ಹಾಗೂ ಪತ್ರಕರ್ತ ವಿಶಾಲ್ ದೋರನಹಳ್ಳಿ, ಮಣಿಕಂಠ ದೊರೆ, ಪ್ರಶಾಂತ ಜಂಗಳಿ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!