ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲು ತಾಯಿತನವನ್ನು ಅನುಭವಿಸುವ ಹೆಣ್ಣಿಗೆ ಮಗುವಿನ ಮೇಲೆ ಅದೆಷ್ಟು ಪ್ರೀತಿ, ಕಾಳಜಿ ಇರುತ್ತೆ. ಅದರಲ್ಲೂ ಒಬ್ಬರೇ ಆರೈಕೆ ಮಾಡಬೇಕೆಂದಾಗ ಭಯ, ಆತಂಕ ಎರಡೂ ಇರುತ್ತೆ.. ನಿಮಗೂ ಈ ರೀತಿ ಅನಿಸಿದರೆ.. ನಿಮ್ಮ ಮಗು ಹುಟ್ಟಿದ ಮೊದಲ 30ದಿನ ಈ ರೀತಿ ಕೇರ್ ಮಾಡಿ..
- ಮಗುವನ್ನು ಹಿಡಿದುಕೊಳ್ಳುವಾಗ ಜೋಪಾನ. ಅದರ ಕುತ್ತಿಗೆಗೆ ನಿಮ್ಮ ಕೈಗಳನ್ನು ಸಪೋರ್ಟ್ ಆಗಿ ಕೊಡಿ.
- ಮಗುವಿಗೆ ಮೃದುವಾಗಿ ಸ್ನಾನ ಮಾಡಿಸಿ. ಮಗುವಿನ ಚರ್ಮವನ್ನು ಡ್ರೈ ಆಗಿಸಬೇಡಿ.ಲೋಷನ್ ಹಚ್ಚಿ.
- ಸರಿಯಾದ ಸಮಯಕ್ಕೆ ಮಗುವಿಗೆ ಹಾಲುಣಿಸಿ. ಮಗು ಕೈ ಬೆರಳನ್ನು ಬಾಯಿಗೆ ಇಡುವುದು, ಅಳುತ್ತಿದ್ದರೆ ಹಸಿವಾಗಿದೆ ಎಂದರ್ಥ.
- ಈಗ ಕೋವಿಡ್, ಒಮಿಕ್ರಾನ್ ಅಂತೆಲ್ಲಾ ಬಂದಿದೆ. ಆದಷ್ಟು ಮಗುವನ್ನು ಜನಸಂದಣಿಯಿಂದ ದೂರ ಇರಿಸಿ.
- ಮಕ್ಕಳಿಗೆ ತುಂಬಾ ಡ್ರೆಸ್ ಹಾಕಬೇಡಿ. ವಾತಾವರಣಕ್ಕೆ ತಕ್ಕಂತ ಬಟ್ಟೆಗಳನ್ನು ಮಾತ್ರ ಹಾಕಿ.
- ಮಕ್ಕಳಿಗೆ ಡೈಪರ್ ಹಾಕೋದನ್ನ ಆದಷ್ಟು ಕಡಿಮೆ ಮಾಡಿ. ಇದು ಅವರಿಗೆ ಇರಿಟೇಟ್ ಆಗಬಹುದು.
- ಮಗುವಿಗೆ ಸ್ನಾನಕ್ಕೂ ಮುನ್ನ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದು ಮಗುವಿನ ನಿದ್ದೆ ಹಾಗೂ ಮೈ ಕೈ ನೋವಿದ್ದರೆ ಕಡಿಮೆ ಮಾಡುತ್ತದೆ.
- ಮಗುವಿನೊಂದಿಗೆ ಖುಷಿಯಾಗಿ ಮಾತನಾಡಿ, ಮುದ್ದು ಮಾಡಿ. ಇದರಿಂದ ಮಗುವಿಗೆ ನಿಮ್ಮ ಸ್ಪರ್ಶ ಪರಿಚಯವಾಗುತ್ತೆ.