ಪಾಕಿಸ್ತಾನದ ಕೆನಡಾ ರಾಯಭಾರ ಕಚೇರಿಯಿಂದ ಪಿಎಫ್‌ಐ ಪರವಾಗಿ ಟ್ವೀಟ್: ವೈರಲ್‌ ಆಗುತ್ತಿದೆ ಅಳಿಸಲ್ಪಟ್ಟ ಟ್ವೀಟ್‌ನ ಸ್ಕ್ರೀನ್‌ ಶಾಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ಕೆನಡಾದ ರಾಯಭಾರ ಕಚೇರಿ ಟ್ವೀಟ್‌ ಮಾಡಿರುವುದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟ್ವೀಟ್‌ ಪ್ರಸ್ತುತ ಅಳಿಸಲ್ಪಟ್ಟಿದೆಯಾದರೂ (ಡಿಲಿಟ್‌ ಮಾಡಲಾಗಿದೆ) ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ, ಪಾಕಿಸ್ತಾನ ಕಾನ್ಸುಲೇಟ್ ಜನರಲ್ ವ್ಯಾಂಕೋವರ್‌ನ ಪರಿಶೀಲಿಸಿದ (ಬ್ಲೂಟಿಕ್) ಹ್ಯಾಂಡಲ್ ಈಗ ನಿಷೇಧಿತ PFI ನ ಟ್ವೀಟ್‌ಗೆ ಪ್ರತ್ಯುತ್ತರಿಸಿದೆ ಮತ್ತು UN ಮಾನವ ಹಕ್ಕುಗಳು, ಪಾಕಿಸ್ತಾನದ ವಿದೇಶಾಂಗ ಕಚೇರಿಯನ್ನು ಟ್ಯಾಗ್ ಮಾಡಿದೆ. ನಿಷೇಧಗೊಳ್ಳುವ ಒಂದು ದಿನ ಮೊದಲು ಪಿಎಫ್‌ಐ ತನ್ನ ಟ್ವೀಟ್‌ನಲ್ಲಿ ಬೆಂಬಲಕ್ಕಾಗಿ ಕರೆ ನೀಡಿತ್ತು.

ಮಂಗಳವಾರದ ಎರಡನೇ ಸುತ್ತಿನ ದಮನದ ನಡುವೆ PFI ತನ್ನ ಟ್ವೀಟ್‌ನಲ್ಲಿ ಬೆಂಬಲಕ್ಕಾಗಿ ಕರೆ ನೀಡಿತ್ತು. “ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತಡೆಗಟ್ಟುವ ಕಸ್ಟಡಿ ಹೆಸರಿನಲ್ಲಿ ಬೃಹತ್ ಬಂಧನಗಳು ನಡೆಯುತ್ತಿವೆ. ಪಿಎಫ್‌ಐ ಅನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಹಕ್ಕನ್ನು ತಡೆಗಟ್ಟಲಾಗುತ್ತಿದೆ. ಈ ನಿರಂಕುಶ ಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಿರೀಕ್ಷಿತವಾಗಿದೆ.” ಎಂದು ಪಿಎಫ್‌ಐ ಟ್ವೀಟ್‌ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ಕಾನ್ಸುಲೇಟ್ ಜನರಲ್ ವ್ಯಾಂಕೋವರ್‌ನ ಟ್ವೀಟರ್‌ ಹ್ಯಾಂಡಲ್ ಅಂತರರಾಷ್ಟ್ರೀಯ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿರುವುದನ್ನು ಸ್ಕ್ರೀನ್‌ಶಾಟ್ ಬಹಿರಂಗ ಪಡಿಸಿದೆ.

ಈ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಎದ್ದಿವೆ ಎಂದು ಹಿಂದುಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!