ತಿರುಪತಿ ಲಡ್ಡು ವಿವಾದ: ಸದ್ಗುರು ಜಗ್ಗಿ ವಾಸುದೇವ್ ರಿಯಾಕ್ಷನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಲಡ್ಡು ಪ್ರಸಾದ ವಿವಾದದಿಂದ ದೇಶದ ರಾಜಕೀಯ ವಾತಾವರಣ ಬಿಸಿಯಾಗಿದೆ. ಹಿಂದಿನ ಸರ್ಕಾರದಲ್ಲಿ ತಿರುಪತಿ ದೇವಸ್ಥಾನದಲ್ಲಿ ಸಿಗುವ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೀಡಿದ ಹೇಳಿಕೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಇದೀಗ ಈ ವಿವಾದದ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಹೇಳಿಕೆ ಕೂಡ ಹೊರಬಿದ್ದಿದೆ. ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬನ್ನು ಕಾಣುವುದು ಅತ್ಯಂತ ಅಸಹ್ಯಕರವಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಹಿಂದು ದೇವಾಲಯಗಳನ್ನು ಭಕ್ತರಿಂದ ನಡೆಸಬೇಕು ಮತ್ತು ಸರ್ಕಾರದ ಆಡಳಿತದಿಂದ ಅಲ್ಲ ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ವಿವಾದದ ಕುರಿತು ಸದ್ಗುರು ಜಗ್ಗಿ ವಾಸುದೇವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ, ‘ದೇವಸ್ಥಾನದ ಪ್ರಸಾದದಲ್ಲಿ ಭಕ್ತರು ಗೋಮಾಂಸ ಸೇವಿಸುವುದು ಅಸಹ್ಯಕರವಾಗಿದೆ. ಅದಕ್ಕಾಗಿಯೇ ದೇವಾಲಯಗಳನ್ನು ಭಕ್ತರು ನಡೆಸಬೇಕೇ ಹೊರತು ಸರ್ಕಾರದ ಆಡಳಿತದಿಂದಲ್ಲ. ಭಕ್ತಿ ಇಲ್ಲದಿದ್ದಲ್ಲಿ ಶುದ್ಧತೆ ಇರುವುದಿಲ್ಲ, ಈಗ ಹಿಂದು ದೇವಾಲಯಗಳನ್ನು ಧರ್ಮನಿಷ್ಠ ಹಿಂದುಗಳು ನಡೆಸಬೇಕಾದ ಸಮಯ ಬಂದಿದೆ ಎಂದಿದ್ದಾರೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!