ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟ 17 ವರ್ಷದ ಫುಟ್ಬಾಲ್ ಆಟಗಾರ್ತಿ: ಇಬ್ಬರು ವೈದ್ಯರು ಸಸ್ಪೆಂಡ್‌


ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಚೆನ್ನೈ ಆಸ್ಪತ್ರೆಯಲ್ಲಿ ಹದಿಹರೆಯದ ಫುಟ್ಬಾಲ್ ಆಟಗಾರ್ತಿ ಮೃತಪಟ್ಟ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರವು ವೈದ್ಯಕೀಯ ನಿರ್ಲಕ್ಷ್ಯ ತೋರತಿದ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದೆ.
17 ವರ್ಷದ ಫುಟ್ಬಾಲ್‌ ಆಟಗಾರ್ತಿ ಆರ್. ಪ್ರಿಯಾ  ಬಿಎಸ್ಸಿ ದೈಹಿಕ ಶಿಕ್ಷಣದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಮೊಣಕಾಲಿನ ಅಸ್ಥಿರಜ್ಜು ಹರಿದ ಕಾರಣ ಕಳೆದ ವಾರ ಆಕೆಐನ್ನು ಪೆರಿಯಾರ್ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆಕೆಯ ಕಾಲನ್ನು ಕತ್ತರಿಸಬೇಕಾಯಿತು. ಆ ಬಳಿಕ ಬಹು ಅಂಗಾಂಗ ವೈಫಲ್ಯದಿಂದಾಗಿ ಆಕೆ ನಿಧನಳಾಗಿದ್ದಳು.
“ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಅಸಡ್ಡೆಯಿಂದಾಗಿ, ಕಂಪ್ರೆಷನ್ ಬ್ಯಾಂಡೇಜ್ ತುಂಬಾ ಬಿಗಿಯಾಗಿತ್ತು, ಇದು ರಕ್ತದ ಹರಿವಿಗೆ ತೀವ್ರ ಹಾನಿಯನ್ನುಂಟುಮಾಡಿತು ಮತ್ತು ರಕ್ತನಾಳಗಳಲ್ಲಿ ರಕ್ತ ಕಟ್ಟಿಕೊಳ್ಳಲು ಕಾರಣವಾಗಿತ್ತು. ಅವಳು ತುಂಬಾ ನೋವಿನಿಂದ ಬಳಲುತ್ತಿದ್ದಳು” ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.
ಮರುದಿನ ಅವಳನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ (RGGGH) ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ಅವಳ ಜೀವವನ್ನು ಉಳಿಸಲು ನವೆಂಬರ್ 9 ರಂದು ಅವಳ ಕಾಲನ್ನು ಕತ್ತರಿಸಬೇಕೆಂದು ಹೇಳಿದರು.
ಆಕೆ ಐಸಿಯುನಲ್ಲಿದ್ದಾಗ ಹಿರಿಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. “ಆಕೆಯ ರಕ್ತದ ಹರಿವಿನ ಮೇಲೆ ಪರಿಣಾಮ ಬೀರಿದ್ದರಿಂದ  ಮೂತ್ರಪಿಂಡ, ಯಕೃತ್ತು ಮತ್ತು ಹೃದಯಕ್ಕೆ ಹಾನಿಯಾಗಿತ್ತು” ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಮೇಲೆ ತನಿಖೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದ್ದು ಸಾಬೀತಾದ್ದರಿಂದ
ರಾಜ್ಯ ಸರ್ಕಾರವು ಪೆರಿಯಾರ್ ನಗರ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎ ಪಾಲ್ ರಾಮ್ ಶಂಕರ್, ಮೂಳೆಚಿಕಿತ್ಸೆ ಮತ್ತು ಡಾ ಕೆ ಸೋಮಸುಂದರ್‌ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!