Tuesday, July 5, 2022

Latest Posts

ಗುಜರಾತ್‌ಗೆ ‘ಪ್ಲೇ ಆಫ್’ ತೇರ್ಗಡೆ ಗುರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗೆಲುವಿನ ಓಟ ಮುಂದುವರಿಸುತ್ತಿರುವ ಗುಜರಾತ್ ಟೈಟನ್ಸ್ ಇಂದು ನಡೆಯುವ ಪಂದ್ಯವನ್ನೂ ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ತೇರ್ಗಡೆ ಪಡೆಯುವ ಗುರಿ ಹೊಂದಿದೆ. ಇಂದಿನ ಪಂದ್ಯವನ್ನೂ ಗೆದ್ದುದಾದರೆ ಗುಜರಾತ್ ಪ್ಲೇ ಆಫ್ ಪ್ರವೇಶಿಸುವ ಮೊದಲ ತಂಡವಾಗಲಿದೆ.
ಪಂಜಾಬ್ ಕಿಂಗ್ಸ್ ಅದರ ಎದುರಾಳಿಯಾಗಿದ್ದು, ಸದ್ಯದ ಮಟ್ಟಿಗೆ ಗುಜರಾತ್ ತಂಡವೇ ಗೆಲ್ಲುವ ಫೇವರಿಟ್ ಆಗಿದೆ. ತೀರಾ ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಇಂದಿನ ಪಂದ್ಯ ಗೆಲ್ಲಬೇಕಾದರೆ ಬಹಳಷ್ಟು ಶ್ರಮ ಪಡಬೇಕಾಗಿದೆ.
ಗುಜರಾತ್ ತಂಡದ ಗುಣಾತ್ಮಕ ಅಂಶವೆಂದರೆ ಪ್ರತಿಯೊಬ್ಬ ಆಟಗಾರರೂ ನಿರ್ಣಾಯಕ ಸಮಯದಲ್ಲಿ ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಗೆಲ್ಲಿಸುತ್ತಿರುವುದು. ಹಾರ್ದಿಕ್ ಪಾಂಡ್ಯಾ, ತೆವಾಟಿಯಾ, ರಶೀದ್ ಖಾನ್, ಮಿಲ್ಲರ್ ಇವರೆಲ್ಲರೂ ತಂಡವನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಮ್ಯಾಥ್ಯೂ ವೇಡ್ ವಿಫಲತೆಯಿಂದಾಗಿ ತಂಡಕ್ಕೆ ಬಂದ ವೃದ್ಧಿಮಾನ್ ಶಾ ಆರಂಭಿಕ ಆಟಗಾರನ ಜಾಗವನ್ನು ಸಮರ್ಥವಾಗಿ ತುಂಬಿದ್ದಾರೆ.
ಇವೆರಡು ತಂಡಗಳ ಹಿಂದಿನ ಮುಖಾಮುಖಿಯಲ್ಲಿ ತೆವಾಟಿಯಾ ಇನ್ನಿಂಗ್ಸ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಬಾರಿಸಿ ಗುಜರಾತ್‌ಗೆ ಗೆಲುವು ತಂದುಕೊಟ್ಟಿದ್ದರು.
ಪಂಜಾಬ್ ಕಿಂಗ್ಸ್‌ನ ಸಮಸ್ಯೆಯೆಂದರೆ ಬ್ಯಾಟಿಂಗ್‌ನಲ್ಲಿ ಅಸ್ಥಿರತೆ. ನಾಯಕ ಮಯಾಂಕ್ ಅಂತೂ ದೊಡ್ಡ ಕೊಡುಗೆ ನೀಡಲು ಇನ್ನೂ ಸಫಲರಾಗಿಲ್ಲ. ಬ್ಯಾರಿಸ್ಟೋವ್, ಲಿವಿಂಗ್‌ಸ್ಟೋನ್ , ಶಿಖರ್ ಧವನ್‌ರಂತಹ ಪ್ರಮುಖ ಆಟಗಾರರಿದ್ದರೂ ಅವರೆಲ್ಲರೂ ತಮ್ಮ ನೈಜ ಸಾಮರ್ಥ್ಯವನ್ನು ಪ್ರಕಟಪಡಿಸಿಲ್ಲ.
ಬೌಲಿಂಗ್‌ನಲ್ಲಿ ಕೂಡ ಪಂಜಾಬ್ ಕಿಂಗ್ಸ್ ಎದುರಾಳಿಯನ್ನು ಕಂಗೆಡಿಸುವಷ್ಟು ಪ್ರಬಲವಾಗಿ ಕಂಡುಬರುತ್ತಿಲ್ಲ .

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss