ಇಡಿ ವಿಚಾರಣೆ ಹೆಸರಿನಲ್ಲಿ ರಾಹುಲ್ ಗಾಂಧಿಗೆ ಕಿರುಕುಳ: ಎಚ್‌ಡಿಕೆ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡಿ ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಡಿ, ರಾಹುಲ್ ಗಾಂಧಿಯನ್ನು ಸತತ 5 ದಿನಗಳಿಂದ ವಿಚಾರಣೆಗೆ ಕರೆಯುತ್ತಿದ್ದಾರೆ.

ಕಂಪನಿ ಆರಂಭ, ಹಣ ಎಲ್ಲಿಂದ ಬಂತು ಎನ್ನುವ ಸಂಪೂರ್ಣವಾಗಿ ದಾಖಲೆಗಳು ರಾಹುಲ್ ಬಳಿಯೇ ಇವೆ. ಆದರೂ ಕಚೇರಿಯಲ್ಲಿ ಕೂರಿಸಿಕೊಂಡು 10 ಗಂಟೆಗಳ ಕಾಲ ಅವರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದ ಅವರು, ಈ ವಿಚಾರಣೆಯಿಂದ ಎಷ್ಟು ಮಾಹಿತಿ ಸಂಗ್ರಹಿಸಿದ್ದೀರಿ? ಒಂದು ತಾಸು ನಡೆಸಬೇಕಾದ ವಿಚಾರಣೆಯನ್ನು ಇನ್ನು ಎಷ್ಟು ದಿನ ತಳ್ಳುತ್ತೀದ್ದೀರಿ..? ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!