ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌, ಮತ್ತೆ ಗಗನಕ್ಕೇರಿದ ಬೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿನ್ನ ಖರೀದಿ ಮಾಡುವವರಿಗೆ ಇದೊಂದು ಶಾಕಿಂಗ್ ನ್ಯೂಸ್ ಆಗಿದೆ. ಕೆಲ ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ಬೆಲೆ ಇದ್ದಕ್ಕಿದ್ದಂತೆ 500ರೂಪಾಯಿ ಏರಿಕೆಯಾಗಿದೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಬೆಲೆ ಏರುತ್ತಿದ್ದಂತೆ, ದೇಶೀಯ ಬೆಲೆಗಳು ಸಹ ಏರಿಕೆಯಾಗಿವೆ. ಮುಂಬೈ ಮೂಲದ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​(ಐಬಿಜೆಎ) ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎರಡು ದಿನಗಳಲ್ಲಿ 440ಕ್ಕಿಂತ ಹೆಚ್ಚು ಏರಿಕೆಯಾಗಿ 53,460 ರೂ.ಗೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

ನಗರ                   24ಕ್ಯಾರೆಟ್‌          22ಕ್ಯಾರೆಟ್

ಅಹಮಾದಾಬಾದ್      ₹ 53,540         ₹ 49,420

ಬೆಂಗಳೂರು            ₹ 53,840        ₹ 49,350

ಚನ್ನೈ                  ₹ 54,660        ₹ 50,105

ಕೊಯಂಬತ್ತೂರು       ₹ 54,400        ₹ 49,870

ದೆಹಲಿ                 ₹ 53,840        ₹ 49,350

ಹೈದರಾಬಾದ್         ₹ 53,840        ₹ 49,350

ಕೇರಳ                 ₹ 53,840        ₹ 49,350

ಮುಂಬೈ                ₹ 53,840       ₹ 49,350

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!