Wednesday, November 29, 2023

Latest Posts

ಇಂದು ನಿಮಗೆ ಒಂದು ಸೀಕ್ರೆಟ್ ಹೇಳುತ್ತೇನೆ…ತೆಲಂಗಾಣದಲ್ಲಿ 2020ರ ಕೆಸಿಆರ್ ಮನವಿ ಬಹಿರಂಗಪಡಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಚಾಲನೆ ನೀಡಲುಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾಷಣ ವೇಳೆ ಹೇಳಿದ ಆ ಒಂದು ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

2020ರಲ್ಲಿ ನಡೆದ ಘಟೆನೆ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಡೆ ಬಹಿರಂಗಪಡಿಸಿದ್ದಾರೆ.

2020ರಲ್ಲಿ ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಡೆದಿತ್ತು. ಬಿಜೆಪಿ 48 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತು. ಆದರೆ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಫಲಿತಾಂಶದ ಬೆನ್ನಲ್ಲೇ ಕೆಸಿಆರ್ ದೆಹಲಿಗೆ ಆಗಮಿಸಿ ನನ್ನ ಭೇಟಿಯಾಗಿದ್ದರು. ಹೈದರಾಬಾದ್ ಮುನ್ಸಿಪಲ್‌ನಲ್ಲಿ ಬಿಆರ್‌ಎಸ್ ಪಕ್ಷಕ್ಕೆ ಬೆಂಬಲ ನೀಡಿ, ನಾವು ಎನ್‌ಡಿಎ ಒಕ್ಕೂಟ ಸೇರಿಕೊಳ್ಳುತ್ತೇವೆ ಎಂಬ ಮನವಿ ಮಾಡಿದ್ದರು. ಆದರೆ ಕೆಸಿಆರ್ ಈ ಮನವಿಯನ್ನು ನಾನು ತಿರಸ್ಕರಿಸಿದ್ದೆ. ನಿಮ್ಮ ರಾಜಕೀಯ ಉದ್ದೇಶ, ಅಧಿಕಾರಕ್ಕಾಗಿ ತೆಲಂಗಾಣ ಜನತೆಗೆ ಮೋಸ ಮಾಡಲಾರೆ ಎಂದು ಉತ್ತರ ನೀಡಿದ್ದೆ ಎಂದು ಪ್ರಧಾನಿ ಮೋದಿ ಇಂದು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ತೆಲಂಗಾಣದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಇಂದು ನಿಮಗೆ ಒಂದು ಸೀಕ್ರೆಟ್ ಬಹಿರಂಗಪಡಿಸುತ್ತೇನೆ . ಈ ವಿಚಾರ ನಾನು ಇದುವರೆಗೂ ಎಲ್ಲೂ ಹೇಳಿಲ್ಲ. ಇಂದು ಬಹಿರಂಗಪಡಿಸುತ್ತೇನೆ. ನಾನು ಹೇಳುವ ಮಾತನ್ನು ಇಲ್ಲಿರುವ ಮಾಧ್ಯಮದವರು ಪರೀಶೀಲನೆ ಮಾಡಿ. ದಿನಾಂಕ ಸೇರಿದಂತೆ ಎಲ್ಲಾ ವಿಚಾರವನ್ನು ಕೂಲಂಕೂಷವಾಗಿ ಪರಿಶೀಲಿಸಿ ಎಂದು ಮಾಧ್ಯಮ ಮಿತ್ರರಿಗೆ ಸವಾಲು ಹಾಕಿ ಮಾತು ಮುಂದುವರಿಸಿದರು.

2020ರಲ್ಲಿ ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಡೆದಿತ್ತು. ಬಿಜೆಪಿ 48 ಸ್ಥಾನ ಗೆದ್ದಿತ್ತು. ಆದರೆ ಯಾರಿಗೂ ಬಹುಮತ ಬರಲಿಲ್ಲ. ಇತ್ತ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಪಕ್ಷ ಹೈದರಾಬಾದ್ ಮುನ್ಸಿಪಲ್ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿಗೆ ಅಡ್ಡಿಯಾಗಿತ್ತು. ಹೀಗಾಗಿ ಫಲಿತಾಂಶದ ಬೆನ್ನಲ್ಲೇ ಕೆ ಚಂದ್ರಶೇಖರ್ ರಾವ್ ನೇರವಾಗಿ ದೆಹಲಿಗೆ ಆಗಮಿಸಿ ನನ್ನನ್ನು ಭೇಟಿಯಾಗಿದ್ದರು.ನನಗೆ ದೊಡ್ಡ ಶಾಲು ಹಾಕಿ ಸನ್ಮಾನ ಮಾಡಿದ್ದರು. ಪ್ರೀತಿಯಿಂದ, ಆತ್ಮೀಯದಿಂದ ವಿನಯದಿಂದ ಮಾತನಾಡಿಸಿದ್ದರು. ನಿಮ್ಮ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹಲವು ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಕೆಸಿಆರ್ ವ್ಯಕ್ತಿತ್ವವೇ ಹೀಗಲ್ಲ. ಆದರೂ ಬಿಜೆಪಿ ಹಾಗೂ ಮೋದಿಯನ್ನು ಹೊಗಳಿದರು. ಬಳಿಕ ಒಂದು ಮಾತು ಹೇಳಿದರು.

ಅದೇನೇದರೆ ಹೈದರಾಬಾದ್ ಮುನ್ಸಿಪಲ್‌ನಲ್ಲಿ ಬಿಆರ್‌ಎಸ್ ಪಕ್ಷ ಅಧಿಕಾರ ಹಿಡಿಯಲು ಬಿಜೆಪಿ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಬಿಆರ್‌ಎಸ್ ಪಕ್ಷವನ್ನು ಎನ್‌ಡಿಎ ಒಕ್ಕೂಟಕ್ಕೆ ಸೇರ್ಪಡೆ ಮಾಡಿ ಎಂದು ಮನವಿ ಮಾಡಿದರು.ಈ ವೇಳೆ ನಾನು ಒಂದು ಮಾತು ಹೇಳಿದ್ದೆ. ನಿಮ್ಮ ರಾಜಕೀಯ ಕಾರಣಕ್ಕಾಗಿ ನಿಮ್ಮ ಜೊತೆ ಸೇರಲು ಸಾಧ್ಯವಿಲ್ಲ. ನಾವು ತೆಲಂಗಾಣದಲ್ಲಿ ವಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ. ನಮ್ಮ ಕಾರ್ಯಕರ್ತ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿ ಹಿಂಸೆ ನೀಡಿದರೂ ಮತ್ತೆ ಜನರತ್ತ ತೆರಳಿ ಕೆಲಸ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ತೆಲಂಗಾಣ ಜನತೆ ಮೋಸ ಮಾಡಲ್ಲ ಎಂದು ಉತ್ತರ ನೀಡಿದ್ದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!