January15, 2026
Thursday, January 15, 2026
spot_img

ಇಂದು ದೇಶ ಎಷ್ಟು ಬಲಿಷ್ಠವಾಗಿದೆಂದರೆ ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗುವುದು ಖಚಿತ: ದೋವಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಭಾರತ ಯಾವ ರೀತಿ ಬಲಿಷ್ಠವಾಗಿದೆ ಎಂದರೆ ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗುವುದು ಖಚಿತ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು, ಯುವಕರನ್ನುದ್ದೇಶಿಸಿ ಮಾತನಾಡಿದರು.

ಇಂದು ಎಲ್ಲವೂ ಬದಲಾಗಿರಬಹುದು, ಆದರೆ ಒಂದು ವಿಷಯ ಎಂದಿಗೂ ಹಾಗೆಯೇ ಇರುತ್ತದೆ. ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುವ ಕೆಲವು ಸಣ್ಣ ವಿಚಾರಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಎಂದಿಗೂ ಹಾಗೇ ಇರುತ್ತದೆ. ನಿಮ್ಮ ಜೀವನದ ಪ್ರತಿ ಹಂತದಲ್ಲಿಯೂ ನಿರ್ಧಾರ ತೆಗೆದುಕೊಳ್ಳುತ್ತಲೇ ಇರುತ್ತೀರಿ. ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ಸಂಘರ್ಷಗಳು ಮತ್ತು ಯುದ್ಧಗಳಿಗೆ ಕಾರಣ ಕೆಲವು ದೇಶಗಳು ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಬಯಸುತ್ತವೆ. ಅದಕ್ಕಾಗಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುತ್ತಿವೆ. ಆದರೆ ಮೊದಲು ನೀವು ಶಕ್ತಿಶಾಲಿಯಾಗಿ, ಸ್ವತಂತ್ರರಾಗಿರಬೇಕು. ನಿಮ್ಮಲ್ಲಿ ಆತ್ಮವಿಶ್ವಾಸವಿರಬೇಕು. ಆಗ ಮಾತ್ರ ನಿಮ್ಮ ಶಸ್ತ್ರಾಸ್ತ್ರಗಳಿಗೆ ಬಲತುಂಬಿದಂತಾಗುತ್ತದೆ. ಇಂದು ನಮ್ಮ ದೇಶದಲ್ಲಿ ಅಂತಹ ನಾಯಕತ್ವವಿರುವುದು ನಮ್ಮ ಅದೃಷ್ಟ. ಅವರ ಬದ್ಧತೆ, ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಎಂತಹ ಬಲಿಷ್ಠ ಹಂತಕ್ಕೆ ತಂದಿದ್ದಾರೆ ಎಂದರೆ , ದೇಶದ ಭವಿಷ್ಯ ಯುವಜನರು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ ಸೇರಿದಂತೆ ಸ್ವಾತಂತ್ರ‍್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಿ, ಇತಿಹಾಸದ ಅಪಮಾನಗಳನ್ನು ಮರೆಯದೆ, ನಮ್ಮ ಮೌಲ್ಯಗಳ ಆಧಾರದ ಮೇಲೆ ಮಹಾನ್ ಭಾರತವನ್ನು ಮತ್ತೆ ನಿರ್ಮಿಸುವುದೇ ನಿಜವಾದ ಪ್ರತೀಕಾರ ಎಂದು ಯುವಜನರಿಗೆ ಕರೆ ನೀಡಿದ್ದಾರೆ.

Most Read

error: Content is protected !!