May 17, 2026
Sunday, May 17, 2026
spot_img

ದಿನಭವಿಷ್ಯ: ಸಕಾಲದಲ್ಲಿ ಕೆಲಸ ಮುಗಿಸಿಬಿಡಿ, ವ್ಯವಹಾರದಲ್ಲಿ ವಿನಯ ಇರಲಿ

ಮೇಷ
ಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ ಬಗ್ಗೆ ಎಚ್ಚರ ವಹಿಸಿ. ಆರ್ಥಿಕ ಉನ್ನತಿ. ಕೌಟುಂಬಿಕ ಭಿನ್ನಮತ ಶಾಂತಿಯಿಂದ ಬಗೆಹರಿಸಿ.
ವೃಷಭ
ಮನಬಂದಂತೆ ಖರ್ಚು ಮಾಡದಿರಿ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಯೋಗವಿದೆ. ಸಾಂಸಾರಿಕ ಸೌಹಾರ್ದ, ಸಾಮರಸ್ಯ.  
ಮಿಥುನ
ಸಕಾಲದಲ್ಲಿ ಕಾರ್ಯ ಮುಗಿಸಿ. ಇತರರ ಜತೆ ವ್ಯವಹಾರದಲ್ಲಿ ವಿನಯ ಇರಲಿ. ದಾರ್ಷ್ಟ್ಯ ವರ್ತನೆ ತೋರದಿರಿ. ಹೊಸ ಸ್ನೇಹ ಮೂಡಬಹುದು.
ಕಟಕ
ಪಾಸಿಟಿವ್ ಚಿಂತನೆ ಇಂದು ಅವಶ್ಯ. ಸಣ್ಣ ವಿಷಯಕ್ಕೂ ಕಳವಳ ಅನಗತ್ಯ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ.

ಸಿಂಹ
ಆತುರದ ಕ್ರಮ ಬೇಡ. ಯೋಚಿಸಿ ಕಾರ್ಯ ಎಸಗಿ. ಸಣ್ಣ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಸಹನೆ ಅತಿ ಮುಖ್ಯ.  
ಕನ್ಯಾ
ಕೌಟುಂಬಿಕ ಶಾಂತಿ, ಸೌಹಾರ್ದ. ಆದಾಯದಲ್ಲಿ ಹೆಚ್ಚಳ. ಶೇರು ವ್ಯವಹಾರದಲ್ಲಿ ಲಾಭ. ಹೊಸ ಸಂಬಂಧ ಬೆಳೆಯುವ ಸಾಧ್ಯತೆ ಕಾಣುತ್ತಿದೆ.
ತುಲಾ
ಸ್ವಲ್ಪ ಮಟ್ಟಿನ ಅಶಾಂತ ಮನಸ್ಸು. ಆದರೆ ಅದು ದೀರ್ಘ ಕಾಲ ಉಳಿಯದು. ಇತರ ಹೊಣೆಗಾರಿಕೆ ನಿಮ್ಮನ್ನು ಕಾದಿರುತ್ತದೆ.            
ವೃಶ್ಚಿಕ
ನಿಮ್ಮ ವ್ಯವಹಾರ ವಿಸ್ತರಿಸುವ ಅವಕಾಶ. ಕಾಲ ಪ್ರಶಸ್ತವಾಗಿದೆ. ಕೌಟುಂಬಿಕ ಪರಿಸರ ಹಿತಕರ. ಯಾವುದೇ ಭಿನ್ನಮತ ಬಾಽಸದು.    
ಧನು
ನಿಮ್ಮ ಕಾರ್ಯದಿಂದ ಇತರರ ಗಮನ ಸೆಳೆಯುವಿರಿ. ನಿಮ್ಮ ಗುರಿ ತಲುಪಲು ಕಠಿಣ ಪ್ರಯತ್ನ ನಡೆಸಿರಿ. ಆರೋಗ್ಯ ಸಮಸ್ಯೆ ಕಾಡಬಹುದು. ಮಕರ
ಆಪ್ತರ ಕುರಿತಂತೆ ಅತಿಯಾದ ಪೊಸೆಸಿವ್ ಧೋರಣೆ ಬಿಡಿ. ಅದರಿಂದ ಸಂಬಂಧ ಹಾಳಾದೀತು. ಮೃದುವಾಗಿ ವರ್ತಿಸುವುದು ಒಳಿತು.     ಕುಂಭ
ಕೌಟುಂಬಿಕ ಭಿನ್ನಮತ ಸ್ವಲ್ಪ ಕಾಲ ನಿಮ್ಮ ಮನಸ್ಸು ಉದ್ವಿಗ್ನ ಮಾಡಬಹುದು. ಬಳಿಕ ಅದು ಸರಿಯಾಗಲಿದೆ. ವೃತ್ತಿಯಲ್ಲಿ ಸಾಧನೆ.         ಮೀನ
ಏಳುಬೀಳಿನ ಕುರಿತು ಸಮಚಿತ್ತ ಹೊಂದಿರುವುದು ಅವಶ್ಯ. ಏಕೆಂದರೆ ಇಂದು ನೀವು ಏರುಪೇರು ಎರಡನ್ನೂ ಅನುಭವಿಸುವಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !