ದಿನಭವಿಷ್ಯ
ಮೇಷ
ಆತ್ಮೀಯ ಸಂಬಂಧ ಕೆಡಿಸುವ ಸಾಧ್ಯತೆ ಉಂಟಾದರೂ ನಿಮ್ಮ ಸಮಯಪ್ರಜ್ಞೆಯಿಂದ ಅದನ್ನು ತಪ್ಪಿಸಬಲ್ಲಿರಿ. ಅತಿರೇಕದ ಪ್ರತಿಕ್ರಿಯೆ ತೋರದಿರಿ.
ವೃಷಭ
ಇಂದು ನಿಮ್ಮ ದಿನ. ಪ್ರಸಿದ್ಧಿ, ಪ್ರಶಂಸೆ, ಗೌರವ ಪಡೆಯುವಿರಿ. ವೃತ್ತಿ, ಖಾಸಗಿ ಬದುಕು ಎಲ್ಲದರಲ್ಲೂ ನಿಮ್ಮ ನಿರೀಕ್ಷೆಯಂತೆ ಸಾಗುವುದು.
ಮಿಥುನ
ದೀರ್ಘಾವ ಗುರಿ ಸಾಸುವ ನಿಟ್ಟಿನಲ್ಲಿ ಪೂರಕ ಬೆಳವಣಿಗೆ. ಸಂಕಟಗಳು ಬಾಸ ದಂತೆ ಮುನ್ನೆಚ್ಚರಿಕೆ ವಹಿಸಿರಿ. ಕೌಟುಂಬಿಕ ಸಮಾಧಾನ.
ಕಟಕ
ನೀವು ಯಾವ ತಪ್ಪು ಮಾಡದಿದ್ದರೂ ಇತರರ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ. ಅದನ್ನು ಜಾಣತನದಿಂದ ನಿವಾರಿಸಿಕೊಳ್ಳಿ. ದುಡುಕದಿರಿ.
ಸಿಂಹ
ನಿಮ್ಮ ವಿಶ್ವಾಸ ಕುಂದಿಸುವ ಬೆಳವಣಿಗೆ ಸಂಭವಿಸಬಹುದು. ಆದರೆ ಅರ ರಾಗಬೇಕಿಲ್ಲ. ತಾತ್ಕಾಲಿಕ ಸ್ಥಿತಿಯಿದು. ಮುಂದೆ ಎಲ್ಲವೂ ಸುಗಮ.
ಕನ್ಯಾ
ಹೆಚ್ಚು ಚಿಂತೆಗಳಿಲ್ಲದ ಸುಗಮ ದಿನವಿದು. ದೊಡ್ಡ ಹೊಣೆಗಾರಿಕೆ ಬಾಸದು. ಕೈಗೊಂಡ ಕಾರ್ಯಹೆಚ್ಚು ಶ್ರಮವಿಲ್ಲದೆ ಪೂರೈಸುವುದು.
ತುಲಾ
ಉದ್ದೇಶಿತ ಕಾರ್ಯ ಸಲೀಸು. ವಿಘ್ನಗಳು ಬಾಸವು. ಪ್ರಮುಖ ಯೋಜನೆಯೊಂದು ಸಾಕಾರಗೊಳ್ಳುವುದು. ಬಂಧುಮಿತ್ರರಿಂದ ಉತ್ತಮ ಸಹಕಾರ.
ವೃಶ್ಚಿಕ
ಆಹಾರ ಸೇವನೆಯಲ್ಲಿ ಆರೋಗ್ಯಕರ ನಿಯಮ ಪಾಲಿಸಿ. ಇಲ್ಲವಾದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸೀತು. ಹಣದ ವಿಚಾರದಲ್ಲಿ ಚಿಂತೆಯ ಬೆಳವಣಿಗೆ.
ಧನು
ಹೆಚ್ಚು ಉತ್ಸಾಹದ ದಿನ. ಮನಸ್ಸಿನಲ್ಲಿ ತೋಚಿದ್ದು ಕೃತಿಗಿಳಿಸಲು ಹಿಂಜರಿಕೆ ಬೇಡ. ಏಕೆಂದರೆ ಎಲ್ಲವೂ ನಿಮಗೆ ಪೂರಕವಾಗಿ ಸಂಭವಿಸುವುದು.
ಮಕರ
ಕಾರ್ಯದಲ್ಲಿ ವಿಳಂಬ. ಸುಲಭವೆಂದುಕೊಂಡ ಕೆಲಸವು ಕಠಿಣ ವೆನಿಸುವುದು. ಇದರಿಂದ ನಿಮಗೆ ನಿರಾಶೆ. ಇತರರ ಸಹಾಯ ಕೋರಲು ಹಿಂಜರಿಯದಿರಿ.
ಕುಂಭ
ನಿಮ್ಮ ಅತಿಯಾದ ಭಾವುಕತೆಯೇ ನಿಮ್ಮ ಯಶಸ್ಸಿಗೆ ಅಡ್ಡಿ ಬರುತ್ತದೆ. ಕೆಲವು ವಿಷಯಗಳಲ್ಲಿ ವಿವೇಕಕ್ಕೆ ಪ್ರಾಧಾನ್ಯತೆ ಕೊಡಿ, ಭಾವನೆಗಳಿಗಲ್ಲ.
ಮೀನ
ನೀವು ನಂಬಿದವರೇ ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು. ಹಾಗಾಗಿ ಎಲ್ಲರ ಜತೆ ಎಚ್ಚರಿಕೆಯಿಂದ ವ್ಯವಹರಿಸಿ. ನಿಮ್ಮ ಗುಟ್ಟು ಬಿಟ್ಟುಕೊಡದಿರಿ.