ದಿನಭವಿಷ್ಯ| ಇಂದು ಈ ರಾಶಿಯವರಿಗೆ ಯಾವುದೋ ವಿಚಾರ ತಮ್ಮ ಮನಸ್ಸನ್ನು ಕೊರಗುವಂತೆ ಮಾಡುತ್ತದೆ…

ದಿನಭವಿಷ್ಯ

ಮೇಷ
ನಿಮ್ಮ ಸುತ್ತಲಿನ ಜನರೊಂದಿಗೆ ಮಾತಿನ ಜಗಳ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಹಣಕಾಸು ಸಮಸ್ಯೆ ಕಾಡುವುದು.

ವೃಷಭ
ಹಿರಿಯರೊಂದಿಗೆ ವ್ಯವಹರಿಸುವಾಗ ವಿಧೇಯತೆ ಇರಲಿ. ಇಲ್ಲವಾದರೆ ಅವರ ಅವಕೃಪೆಗೆ ತುತ್ತಾಗುವಿರಿ. ಕೌಟುಂಬಿಕ ವಾಗ್ವಾದ, ವೈಮನಸ್ಸು ಸಂಭವ.

ಮಿಥುನ
ಎಂದಿಗಿಂತ ಹೆಚ್ಚು ಹೊಣೆ ಹೆಗಲೇರುವುದು. ಅದನ್ನು ಸರಿಯಾಗಿ ನಿಭಾಯಿಸಿ. ಉದಾಸೀನ ತೋರಿದರೆ ನಿಮಗೆ ಪ್ರತಿಕೂಲವಾದೀತು.

ಕಟಕ
ಆಹಾರದಲ್ಲಿ ಹಿತಮಿತ ಸಾಸಿ. ಇಲ್ಲವಾದರೆ ಹೊಟ್ಟೆ ಸಮಸ್ಯೆಗೆ ಗುರಿಯಾಗುವಿರಿ. ನಿಮ್ಮ ಕಠಿಣ ಕಾರ್ಯಕ್ಕೆ ಉತ್ತಮ ಪ್ರತಿಫಲ ದೊರಕುವುದು.

ಸಿಂಹ
ವೃತ್ತಿಯಲ್ಲಿ ಎಷ್ಟೇ ಬಿಝಿ ಇದ್ದರೂ ಕುಟುಂಬಸ್ಥರ ಬೇಕುಬೇಡ ವಿಚಾರಿಸಿ. ಅವರ ಮುನಿಸು ಕಟ್ಟಿಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಉತ್ತಮ, ಆಪ್ತರಿಂದ ನೆರವು.

ಕನ್ಯಾ
ಇಂದು ಎಲ್ಲವೂ ನಿಮ್ಮ ಪರವಾಗಿದ್ದರೂ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಯಾವುದೋ ವಿಚಾರವು ಮನಸ್ಸನ್ನು ಕೊರೆಯುತ್ತಿರುತ್ತದೆ.

ತುಲಾ
ಧಾರ್ಮಿಕ ವಿಚಾರಗಳು ಆಸಕ್ತಿ ಕೆರಳಿಸಬಹುದು. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ. ಕೌಟುಂಬಿಕ ಬೇಡಿಕೆಗಳು ಹೆಚ್ಚು. ಅದನ್ನು ಚೆನ್ನಾಗಿ ನಿಭಾಯಿಸಿರಿ.

ವೃಶ್ಚಿಕ
ಪರಿಸ್ಥಿತಿ ನಿಮಗೆ ಪ್ರತಿಕೂಲವಾಗಿರುವಂತೆ ಕಂಡರೂ ವಾಸ್ತವದಲ್ಲಿ ನಿಮಗೇನೂ ಹಾನಿಯಾಗದು. ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗುವುದು.

ಧನು
ಕೌಟುಂಬಿಕ ವಾಗ್ವಾದದಿಂದ ನೆಮ್ಮದಿ ನಾಶ. ಮಾತಿಗೆ ಮಾತು ಕೂಡಿಸದಿರಿ. ನೀವು ಮೌನ ತಾಳಿದರೆ ಅದರಿಂದ ಶಾಂತಿ ಮೂಡಬಹುದು.

ಮಕರ
ಇಂದು ನಿಮಗೆ ಮಾನಸಿಕ ಅಸಹನೆ ಹೆಚ್ಚು. ಅದಕ್ಕೆ ಕಾರಣ ನಿಮ್ಮ ಕಾರ್ಯ, ಉದ್ದೇಶ ಸರಿಯಾಗಿ ಈಡೇರದಿರುವುದು.ಸಹನೆಯಿರಲಿ.

ಕುಂಭ
ಬಹುಸಮಯದಿಂದ ಬಾಕಿ ಉಳಿಸಿದ್ದ ಕಾರ್ಯ ಪೂರೈಸಲು ಆದ್ಯತೆ ಕೊಡಿ. ನಿಮ್ಮ ದಕ್ಷತೆಯನ್ನು ಹಿರಿಯರು ಮೆಚ್ಚಿಕೊಳ್ಳುವರು. ಆರ್ಥಿಕ ಲಾಭ.

ಮೀನ
ಜೀವನದ ಕುರಿತಂತೆ ಆಶಾವಾದ ಇಟ್ಟುಕೊಳ್ಳಿ. ಸಣ್ಣ ಹಿನ್ನಡೆ ನಿರಾಶವಾದ ತುಂಬದಿರಲಿ. ಕೌಟುಂಬಿಕ ಆವಶ್ಯಕತೆ ಈಡೇರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!