ದಿನಭವಿಷ್ಯ: ಆರ್ಥಿಕವಾಗಿ ರಿಸ್ಕ್ ತೆಗೆದುಕೊಳ್ಳೋಕೆ ಇಂದು ಸಕಾಲ ಅಲ್ಲ, ದುಡ್ಡಿನ ವಿಷಯದಲ್ಲಿ ಜಾಗ್ರತೆ!

ಮಂಗಳವಾರ, 1 ಫೆಬ್ರವರಿ 2022

ಮೇಷ
ಕೆಲವು ನಿರಾಶೆಯ ಕ್ಷಣಗಳನ್ನು ಎದುರಿಸುವಿರಿ. ನಿಮ್ಮ ಅಲಕ್ಷ್ಯವೇ ಆದಕ್ಕೆ ಕಾರಣವಾಗುತ್ತದೆ. ಸಣ್ಣ ವಿಷಯಕ್ಕೆ ನಿರ್ಲಕ್ಷ್ಯ ಮಾಡಬಾರದು.

ವೃಷಭ
ನಕಾರಾತ್ಮಕ ಚಿಂತನೆ ತ್ಯಜಿಸಿ. ಬದುಕಿನ ಸಕಾರಾತ್ಮಕ ವಿಷಯಗಳನ್ನು ಗಮನಿಸಿ. ಕೌಟುಂಬಿಕ ಕಟ್ಟುಪಾಡುಗಳನ್ನು ಮೀರಿ ನಡೆಯದಿರಿ.

ಮಿಥುನ
ಆರ್ಥಿಕವಾಗಿ ರಿಸ್ಕ್ ತೆಗೆದುಕೊಳ್ಳಲು ಸಕಾಲವಲ್ಲ. ನೀವು ಬಯಸಿದ ಫಲ ಪಡೆಯಲಾರಿರಿ. ಹಣದ ವಿಷಯದಲ್ಲಿ ಎಚ್ಚರಿಕೆಯಿರಲಿ.

ಕಟಕ
ಭಾವುಕರಾಗಿ ವರ್ತಿಸಿ ವೃತ್ತಿಯ ಹಿತಾಸಕ್ತಿಗೆ ಧಕ್ಕೆ ತಂದುಕೊಳ್ಳುವಿರಿ. ಕೆಲವು ವಿಷಯಗಳಲ್ಲಿ ವಿವೇಕದಿಂದ ವರ್ತಿಸುವುದು ಒಳ್ಳೆಯದು.

ಸಿಂಹ
ಬಹಳಷ್ಟು ಮಾನಸಿಕ ಒತ್ತಡಕ್ಕೆ ಈಡಾಗುವಿರಿ. ಅದಕ್ಕೆ ಕಾರಣ ವೃತ್ತಿಯಲ್ಲಿನ ಏಳುಬೀಳುಗಳು. ಆರ್ಥಿಕ ಸಂಕಷ್ಟ ಕಾಡುವುದು.

ಕನ್ಯಾ
ನಿಮ್ಮ ಆಪ್ತರಿಗೆ ನೆರವು ನೀಡುವ ಪ್ರಸಂಗ ಒದಗಬಹುದು. ಅದು ನಿಷ್ಪಲವಾಗದು. ಕೌಟುಂಬಿಕ ಒತ್ತಡ ಹೆಚ್ಚಿದರೂ ಅದರಲ್ಲೇ ಸಂತೋಷ ಕಾಣುವಿರಿ.

ತುಲಾ
ಕೆರಿಯರ್‌ನಲ್ಲಿ ಏರುಪೇರು ಸಂಭವಿಸಬಹುದು. ಹಾಗೆಂದು ಹಿನ್ನಡೆಗಳಿಗೆ ಅಂಜುವ ಅಗತ್ಯವಿಲ್ಲ. ದಿನದಂತ್ಯಕ್ಕೆ ನಿಮಗೆ ಪೂರಕ ಬೆಳವಣಿಗೆ.

ವೃಶ್ಚಿಕ
ಪ್ರೀತಿಯ ಭಾವ ನಿಮ್ಮನ್ನು ಆವರಿಸಬಹುದು. ಅದರ ಗುಂಗಿನಲ್ಲೆ ತೇಲುವ ಸಂಭವ. ಹಾಗೆಂದು ನಿಮ್ಮ ಕರ್ತವ್ಯವನ್ನು ಮರೆಯದಿರಿ. ಅದನ್ನೂ ಪೂರೈಸಿರಿ.

ಧನು
ವೃತ್ತಿಯಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಕಾರ್ಯ ಸಾಫಲ್ಯ. ಆದರೆ ಮನೆಯಲ್ಲೇ ನೀವು ಕಷ್ಟ ಎದುರಿಸುವುದು. ಭಿನ್ನಾಭಿಪ್ರಾಯ.

ಮಕರ
ಕೆಲಸದ ಒತ್ತಡದ ಮಧ್ಯೆಯೂ ನಿಮ್ಮ ಆಪ್ತರನ್ನು ಭೇಟಿಯಾಗುವ ಅವಕಾಶ. ಅವರ ಸಂಗದಲ್ಲಿ  ಒತ್ತಡ ಮರೆಯುವಿರಿ.

ಕುಂಭ
ಈವರೆಗೆ ಕಡೆಗಣಿಸಿದ ವಿಚಾರಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಅದರಲ್ಲೇ ನಿಮ್ಮ ಪ್ರಗತಿ ಅಡಗಿದೆ. ಕುಟುಂಬಸ್ಥರ ಸಹಕಾರ ನಿಮಗಿದೆ. ಆರ್ಥಿಕ ಸುಧಾರಣೆ.

ಮೀನ
ಶುಭದಿನಗಳು ನಿಮಗೆ ಕಾದಿವೆ. ವೃತ್ತಿಯಲ್ಲಿ  ಏಳಿಗೆ ಕಾಣುವಿರಿ. ಹಲವರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಪ್ರಗತಿ. ಬಾಕಿ ಇರುವ ಕಾರ್ಯ ಸಂಪೂರ್ಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!