ದಿನಭವಿಷ್ಯ| ಈ ರಾಶಿಯವರಿಗೆ ಇಂದು ಕೌಟುಂಬಿಕ ಹೊಣೆಗಾರಿಕೆ ಹೆಚ್ಚು…

ದಿನಭವಿಷ್ಯ

ಮೇಷ
ನಿಮ್ಮ ಕೆಲಸಗಳನ್ನೆಲ್ಲ ಇಂದು ಕ್ಷಿಪ್ರವಾಗಿ ಮುಗಿಸುವಿರಿ. ಹಾಗಾಗಿ ವೃತ್ತಿಯ ಒತ್ತಡ ಉಂಟಾಗದು. ಆದರೆ ಕೌಟುಂಬಿಕವಾಗಿ ಹೊಣೆ ಹೆಚ್ಚು.

ವೃಷಭ
ಗುಣಾತ್ಮಕವಾಗಿ ದಿನದ ಆರಂಭ. ಎಲ್ಲವೂ ನೀವು ಅಂದುಕೊಂಡಂತೆಯೆ ನಡೆಯುವುದು. ಆರ್ಥಿಕವಾಗಿ ಅಷ್ಟೇನೂ ಹಿತಕರ ದಿನವಲ್ಲ. ಖರ್ಚು ಹೆಚ್ಚಳ.

ಮಿಥುನ
ತಾಳ್ಮೆ ಪರೀಕ್ಷಿಸುವ ಬೆಳವಣಿಗೆ ಸಂಭವಿಸುವುದು. ಕೆಲವರೊಂದಿಗೆ ಮುಕ್ತವಾಗಿ ವ್ಯವಹರಿಸು ವುದೇ ಸೂಕ್ತ. ಮುಚ್ಚುಮರೆ ಬೇಡ.

ಕಟಕ
ನಿಭಾಯಿಸಲಾಗದ ಬಿಕ್ಕಟ್ಟು ಎದುರಿಸುವಿರಿ. ಅದರಿಂದ ದೂರ ಸರಿಯುವುದೇ ಸೂಕ್ತ. ಆಪ್ತರ ವಿರೋಧ ಕಟ್ಟಿಕೊಳ್ಳುವ ಸಂಭವವಿದೆ. ಧನ ನಷ್ಟ.

ಸಿಂಹ
ಕೆಲಸದಲ್ಲಿ ಹಲವಾರು ತೊಂದರೆಗಳು. ನೀವಿಂದು ಹೆಚ್ಚು ಮಾನಸಿಕ ದೃಢತೆ ಪ್ರದರ್ಶಿಸಬೇಕು. ಹೆತ್ತವರ ಜತೆ ವಾಗ್ವಾದ ನಡೆಸಬೇಡಿ.

ಕನ್ಯಾ
ಬಿಡುವಿಲ್ಲದ ಕೆಲಸ. ಒತ್ತಡದ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುವಿರಿ. ಜತೆಗೇ ಖರ್ಚೂ ಹೆಚ್ಚಲಿದೆ. ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ
ಮನಸ್ಸಿನಲ್ಲಿ  ಅನವಶ್ಯ ಚಿಂತನೆಗಳು ಹರಿದಾಡುತ್ತವೆ. ಕಾರಣವಿಲ್ಲದೇ ಚಿಂತಿತರಾಗುವಿರಿ. ಕುಟುಂಬದಲ್ಲಿ ಅಶಾಂತಿ ಮೂಡಬಹುದು.

ವೃಶ್ಚಿಕ
ವೃತ್ತಿ ಕ್ಷೇತ್ರದಲ್ಲಿ  ಸಂತೋಷ ತರುವ ಅನಿರೀಕ್ಷಿತ ಬೆಳವಣಿಗೆ. ಆರ್ಥಿಕವಾಗಿ ಗುಣಾತ್ಮಕ ಪ್ರಗತಿ. ಕೌಟುಂಬಿಕ ಭಿನ್ನಮತ ಪರಿಹಾರ, ಸಹಕಾರ.

ಧನು
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಪ್ರಗತಿ. ಆಪ್ತರೊಂದಿಗಿನ ಸಂಬಂಧ ಸುಧಾರಣೆ. ವೃತ್ತಿಗೆ ಸಂಬಂಧಿಸಿದ ತೊಡಕೊಂದು ಇಂದು ಪರಿಹಾರ ಕಾಣಲಿದೆ.

ಮಕರ
ಇತರರು ನಿಮ್ಮನ್ನು  ಮೆಚ್ಚುವಂತಹ ಕಾರ್ಯ ಮಾಡುತ್ತೀರಿ. ಹಿರಿಯ ಅಧಿಕಾರಿಗಳಿಂದ ಶ್ಲಾಘನೆ. ಅನಿರೀಕ್ಷಿತ ವಲಯದಿಂದ ಧನಲಾಭ.

ಕುಂಭ
ವೃತ್ತಿಯಲ್ಲಿ ಕೆಲ ವರ ವಿರೋಧ ಎದುರಿಸುವಿರಿ. ನೀವೂ ಸಂಘರ್ಷಕ್ಕೆ ಇಳಿಯದಿರಿ. ಕೌಟುಂಬಿಕ ಹೊಂದಾಣಿಕೆ ಅತ್ಯವಶ್ಯ.

ಮೀನ
ದೈನಂದಿನ ಹೊಣೆಗಾರಿಕೆ ನಿಭಾಯಿಸುವಲ್ಲಿ ತೊಡಕುಗಳು. ಆಪ್ತರೊಂದಿಗಿನ ಸಂಬಂಧದಲ್ಲಿ ಬಿಕ್ಕಟ್ಟು. ಆರ್ಥಿಕವಾಗಿ ಹೆಚ್ಚುವರಿ ಖರ್ಚು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!