ಕೊರೊನಾ ವರದಿ| ಸೋಂಕಿನ ಪ್ರಮಾಣ ಏರಿಕೆ, ಇಂದು 3,712 ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತವು ಒಂದೇ ದಿನದಲ್ಲಿ ಸುಮಾರು 1,000 COVID-19 ಪ್ರಕರಣಗಳ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 3,712 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಬುಧವಾರ 2,745 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಗುರುವಾರ, ದೇಶದ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ  22 ದಿನಗಳ ಬಳಿಕ 3,000 ಗಡಿ ದಾಟಿರುವುದು ಇದೇ ಮೊದಲು.

ಕಳೆದ 24 ಗಂಟೆಗಳಲ್ಲಿ 2,584 ಮಂದಿ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆ 4,26,20,394 ಕ್ಕೆ ತಲುಪಿದೆ. ಭಾರತದ ಚೇತರಿಕೆ ದರ ಪ್ರಸ್ತುತ 98.74 ರಷ್ಟಿದೆ. ಸದ್ಯ ದೇಶದಲ್ಲಿ 19,509 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ 1.22 ರಷ್ಟಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!