July 23, 2026
Thursday, July 23, 2026
spot_img

ನಾಳೆ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬವೋ ಹಬ್ಬ: ಒಂದೇ ದಿನ ಭಾರತದ 3 ತಂಡಗಳ ಮ್ಯಾರಥಾನ್‌ ಪಂದ್ಯಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನವೊಂದು ಸಂಭವಿಸಲಿದೆ. ನಾಳೆ ಬುಧವಾರದಂದು ಭಾರತದ ಮೂರು ವಿಭಿನ್ನ ಕ್ರಿಕೆಟ್ ತಂಡಗಳು ಮೂರು ಬೇರೆ ಬೇರೆ ಸರಣಿಗಳಲ್ಲಿ ಏಕಕಾಲಕ್ಕೆ ಕಣಕ್ಕಿಳಿಯುತ್ತಿವೆ. ಬೆಳಗ್ಗಿನಿಂದ ರಾತ್ರಿಯವರೆಗೆ ಸತತವಾಗಿ ನಡೆಯಲಿರುವ ಈ ಮೆಗಾ ಕ್ರಿಕೆಟ್ ಹಬ್ಬ ಅಭಿಮಾನಿಗಳಿಗೆ ಫುಲ್ ಎಂಟರ್‌ಟೈನ್‌ಮೆಂಟ್‌ ನೀಡಲು ಸಜ್ಜಾಗಿದೆ.

ಬೆಳಗ್ಗೆ 10:00 ಗಂಟೆಗೆ ಭಾರತ ‘ಎ’ vs ಪಾಕಿಸ್ತಾನ ‘ಎ’

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ಟ್ರೈ-ನೇಷನ್ ಸರಣಿಯ ಅತ್ಯಂತ ರೋಚಕ ಪಂದ್ಯ ಇದಾಗಿದೆ. ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸೂಪರ್ ಓವರ್ ಸೋಲು ಹಾಗೂ ಮೈದಾನದ ಗಲಾಟೆಯ ಆಘಾತದಿಂದ ಹೊರಬರಲು ಭಾರತ ‘ಎ’ ತಂಡ ಸಜ್ಜಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವ ಆಟಗಾರರು ಕಾಯುತ್ತಿದ್ದಾರೆ.

 ಮಧ್ಯಾಹ್ನ 3:30 ಗಂಟೆಗೆ ಭಾರತ vs ಇಂಗ್ಲೆಂಡ್

ರೋಹಿತ್ ಶರ್ಮಾ ನೇತೃತ್ವದ ಭಾರತದ ಹಿರಿಯರ ಕ್ರಿಕೆಟ್ ತಂಡವು ಬಲಿಷ್ಠ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯವನ್ನಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಮತ್ತು ಫೈನಲ್ ಹಾದಿಯನ್ನು ಸುಲಭ ಮಾಡಿಕೊಳ್ಳಲು ಭಾರತಕ್ಕೆ ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ.

ಸಂಜೆ 7:30 ಗಂಟೆಗೆ ಭಾರತ ಮಹಿಳಾ ತಂಡ vs ನೆದರ್ಲ್ಯಾಂಡ್ಸ್

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಅತ್ಯಂತ ಮಹತ್ವದ ಲೀಗ್ ಪಂದ್ಯ ಇದಾಗಿದೆ. ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫುಲ್ ಫಾರ್ಮ್‌ನಲ್ಲಿರುವ ಹರ್ಮನ್‌ಪ್ರೀತ್ ಕೌರ್ ಪಡೆ, ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !