September 1, 2026
Tuesday, September 1, 2026
spot_img

ಬಾಕ್ಸ್ ಆಫೀಸ್‌ನಲ್ಲಿ ‘ಟಾಕ್ಸಿಕ್’ ಕಲೆಕ್ಷನ್ ಡೌನ್: 300 ಕೋಟಿ ತಲುಪೋದೇ ಕಷ್ಟವಾಯ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತೆ ಎಂದು ಅಂದುಕೊಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಈಗ ಉಲ್ಟಾ ಪಲ್ಟಾ ಆಗಿದೆ. ಭಾನುವಾರ ಚೆನ್ನಾಗಿಯೇ ಇದ್ದ ಕಲೆಕ್ಷನ್, ಸೋಮವಾರ ಬರ್ತಾ ಇದ್ದಂತೆ ಶೇಕಡಾ 67ರಷ್ಟು ಕಮ್ಮಿಯಾಗಿದೆ. ಅಂದರೆ, ಸೋಮವಾರ ಇಡೀ ಭಾರತದಲ್ಲಿ ಈ ಸಿನಿಮಾ ಕಲೆಕ್ಟ್ ಮಾಡಿದ್ದು ಬರಿ 7.75 ರಿಂದ 8 ಕೋಟಿ ರೂಪಾಯಿ ಮಾತ್ರ. ಇಷ್ಟು ದೊಡ್ಡ ಬಜೆಟ್ ಸಿನಿಮಾಗೆ ಇದು ತೀರಾ ಕಮ್ಮಿ ಅಮೌಂಟ್. ಇದರಲ್ಲಿ ಹಿಂದಿ ವರ್ಷನ್ ಒಂದರಲ್ಲೇ 4.75 ಕೋಟಿ ಕಲೆಕ್ಷನ್ ಬಂದಿದೆ.

ಸಿನಿಮಾ ರಿಲೀಸ್ ಆದ ಮೊದಲ ದಿನವೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಸಿನಿಮಾ ನೆಕ್ಸ್ಟ್ ಲೆವೆಲ್ ಹೈಪ್‌ನಲ್ಲಿದೆ ಎಂದು ಎಲ್ಲರೂ ಅಂದುಕೊಂಡಿದ್ರು. ಆದರೆ, ಥಿಯೇಟರ್‌ಗೆ ಹೋದ ಜನರಿಗೆ ಸಿನಿಮಾ ಅಷ್ಟಾಗಿ ಕಿಕ್ ಕೊಡಲಿಲ್ಲ. ಆಡಿಯನ್ಸ್ ಕಡೆಯಿಂದ ನೆಗೆಟಿವ್ ರಿವ್ಯೂಸ್ ಬಂದಿದ್ದೇ ತಡ, ಎರಡನೇ ದಿನದಿಂದಲೇ ಕಲೆಕ್ಷನ್ ಡೌನ್ ಆಯ್ತು.

ಈಗ ಸಿನಿಮಾ ರಿಲೀಸ್ ಆಗಿ ಆರು ದಿನ ಆಗಿದೆ, ಒಟ್ಟು ಕಲೆಕ್ಷನ್ 239 ಕೋಟಿ ತಲುಪಿದ್ದು, ಈ ವಾರ ಮುಗಿಯುವಷ್ಟರಲ್ಲಿ 255 ಕೋಟಿ ತಲುಪಬಹುದು. ಸಿನಿಮಾ ಲೈಫ್‌ಟೈಮ್ ರನ್ ಮುಗಿಯುವಷ್ಟರಲ್ಲಿ 275 ಕೋಟಿ ಬಂದು ನಿಲ್ಲೋ ಸಾಧ್ಯತೆಯಿದೆ. ವರ್ಲ್ಡ್‌ವೈಡ್ ಕಲೆಕ್ಷನ್ ಹೇಗೋ 300 ಕೋಟಿ ಗಡಿ ದಾಟಬಹುದು ಅಷ್ಟೇ.

ದೊಡ್ಡ ಬಜೆಟ್‌ನಲ್ಲಿ, ಭಾರಿ ನಿರೀಕ್ಷೆಯೊಂದಿಗೆ ಬಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಆದಂತೆ ಮೇಲ್ನೋಟಕ್ಕೆ ಅನಿಸ್ತಿದೆ. ಅಷ್ಟೇ ಅಲ್ಲ, ಬಜೆಟ್ ವಿಚಾರದಲ್ಲಿ ನಿರ್ಮಾಪಕರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಬಜೆಟ್ ತುಂಬಾ ಜಾಸ್ತಿಯಾಗಿದ್ದು, ನಾನ್-ಥಿಯೇಟ್ರಿಕಲ್ ರೈಟ್ಸ್‌ನಿಂದಲೂ ಅಂದುಕೊಂಡಷ್ಟು ದುಡ್ಡು ವಾಪಸ್ ಬಂದಿಲ್ಲ. ಇದರಿಂದಾಗಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನಷ್ಟ ಅನುಭವಿಸಿದ ಸಿನಿಮಾಗಳ ಸಾಲಿಗೆ ‘ಟಾಕ್ಸಿಕ್’ ಸೇರೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !