May 19, 2026
Tuesday, May 19, 2026
spot_img

ಪಲ್ಯ, ಗ್ರೇವಿ & More 89 | ಮಲೆನಾಡು ಮತ್ತು ಕರಾವಳಿ ಸ್ಪೆಷಲ್: ಸಾಂಪ್ರದಾಯಿಕ ಕೆಸುವಿನ ಸೊಪ್ಪಿನ ಪಲ್ಯ

ಕೆಸುವಿನ ಸೊಪ್ಪಿನ ಪಲ್ಯವು ಮಲೆನಾಡು ಮತ್ತು ಕರಾವಳಿ ಕರ್ನಾಟಕ ಭಾಗದ ಅತ್ಯಂತ ಸಾಂಪ್ರದಾಯಿಕ ಹಾಗೂ ಜನಪ್ರಿಯವಾದ ಆಹಾರವಾಗಿದೆ. ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುವ ಕೆಸುವಿನ ಎಲೆಗಳಿಂದ ಈ ಪಲ್ಯವನ್ನು ಸಿದ್ಧಪಡಿಸಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು
ಕೆಸುವಿನ ಸೊಪ್ಪು
ಹುಣಸೆಹಣ್ಣು
ಬೆಳ್ಳುಳ್ಳಿ
ಈರುಳ್ಳಿ
ಹಸಿ ಮೆಣಸಿನಕಾಯಿ
ಒಣ ಮೆಣಸಿನಕಾಯಿ
ಸಾಸಿವೆ ಮತ್ತು ಜೀರಿಗೆ
ಕರಿಬೇವಿನ ಸೊಪ್ಪು
ಅರಿಶಿಣ ಪುಡಿ
ಬೆಲ್ಲ
ತೆಂಗಿನಕಾಯಿ
ಅಡುಗೆ ಎಣ್ಣೆ
ಉಪ್ಪು

ಮಾಡುವ ವಿಧಾನ

ಮೊದಲು ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಅದರ ಹಿಂಭಾಗದಲ್ಲಿರುವ ದಪ್ಪನಾದ ನಾರು/ದಂಟನ್ನು ಚಾಕುವಿನಿಂದ ಕೆರೆದು ತೆಗೆಯಬೇಕು. ನಂತರ ಎಲೆಗಳನ್ನು ಅತಿ ಸಣ್ಣದಾಗಿ ಹೆಚ್ಚಿಟ್ಟುಕೊಂಡು ಹೆಚ್ಚಿದ ಸೊಪ್ಪನ್ನು ಒಂದು ಪಾತ್ರೆ ಅಥವಾ ಕುಕ್ಕರ್‌ಗೆ ಹಾಕಿ. ಅದಕ್ಕೆ ತೆಗೆದಿಟ್ಟ ಹುಣಸೆಹಣ್ಣಿನ ರಸ, ಅರ್ಧ ಕಪ್ ನೀರು, ಸ್ವಲ್ಪ ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಕುಕ್ಕರ್‌ನಲ್ಲಿ 3 ವಿಸಲ್ ಅಥವಾ ಪಾತ್ರೆಯಲ್ಲಾದರೆ ಸೊಪ್ಪು ಪೂರ್ತಿ ಸಾಫ್ಟ್ ಆಗುವವರೆಗೆ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ಸ್ವಲ್ಪ ಮ್ಯಾಶ್ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಸಿಡಿಸಿ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಬಾಡಿಸಬೇಕು. ಬಳಿಕ ಒಗ್ಗರಣೆಗೆ ಬೇಯಿಸಿಟ್ಟ ಕೆಸುವಿನ ಸೊಪ್ಪಿನ ಮಿಶ್ರಣ ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಸಣ್ಣ ಉರಿಯಲ್ಲಿ 5-6 ನಿಮಿಷ ಬೇಯಿಸಿ, ಸೊಪ್ಪಿನಲ್ಲಿರುವ ನೀರಿನಂಶವೆಲ್ಲಾ ಇಂಗಿ ಪಲ್ಯ ಮುದ್ದೆಯಂತಾಗಬೇಕು. ಕೊನೆಯಲ್ಲಿ ಹಸಿ ತೆಂಗಿನಕಾಯಿ ತುರಿ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಕೆಸುವಿನ ಸೊಪ್ಪಿಎ ಪಲ್ಯ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !