ಹೊಸದಿಗಂತ ವರದಿ ಗದಗ:
ಶುಭ ಸಮಾರಂಭಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದು, ಹತ್ತಾರು ಜನರಿಗೆ ಗಾಯವಾದ ಘಟನೆ ತಾಲೂಕಿನ ತಿಮ್ಮಾಪೂರ ಗ್ರಾಮದ ಬಳಿ ನಡೆದಿದೆ.
60 ವರ್ಷದ ಬಸವ್ವ ಸತ್ಯಪ್ಪನವರ ಎಂಬ ಮಹಿಳೆ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
ಈ ಟ್ರ್ಯಾಕ್ಟರ್ ತಿಮ್ಮಾಪೂರ ಗ್ರಾಮದಿಂದ ಬಿಡನಾಳ ಗ್ರಾಮಕ್ಕೆ ಶುಭ ಕಾರ್ಯಕ್ಕೆ ತೆರಳುತ್ತಿದ್ದರು. ವೇಗವಾಗಿ ಚಲಿಸುವ ವೇಳೆ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಪಲ್ಟಿಯಾಗಿದೆ.
ಇದನ್ನೂ ಓದಿ:
ಈ ರಸ್ತೆ ಅಪಘಾತದಲ್ಲಿ ಹತ್ತಾರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶುಭ ಸಮಾರಂಭಕ್ಕೆ ಹೋಗಬೇಕಾದವರು ಆಸ್ಪತ್ರೆ ಹಾಗೂ ಸ್ಮಶಾನ ಸೇರಿದ್ದು ದುರಂತವೇ ಸರಿ.



