September 23, 2026
Wednesday, September 23, 2026
spot_img

ಮಡಿಕೇರಿಯಲ್ಲಿ ದುರಂತ: ಪ್ರವಾಸಿಗನ ಮೇಲೆ ಕಾಡಾನೆ ದಾಳಿ, ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಮಡಿಕೇರಿ:

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿ‌ನ ತೆರಾಲು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾನೆ ದಾಳಿಗೆ ಬಲಿಯಾದ ಪ್ರವಾಸಿಗನನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಮುರಳಿಕೃಷ್ಣ (41) ಎಂದು ಗುರುತಿಸಲಾಗಿದೆ.

ಪೊನ್ನoಪೇಟೆ ತಾಲೂಕಿನ ತೆರಾಲು ಗ್ರಾಮದ ಹೋಂಸ್ಟೇಗೆ ಆಗಮಿಸಿದ್ದ ಮುರಳಿಕೃಷ್ಣ ಶನಿವಾರ ಸಂಜೆ ಇತರ ಐವರು ಪ್ರವಾಸಿಗರೊಂದಿಗೆ ವಾಯು ವಿಹಾರಕ್ಕೆ ತೆರಳಿದಾಗ, ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಏಕಾಏಕಿ ಮುರಳಿಕೃಷ್ಣ ಅವರ ಮೇಲೆ‌ ದಾಳಿ ನಡೆಸಿದೆ.

ಇದನ್ನೂ ಓದಿ:

ತೀವ್ರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಆ ವೇಳೆಗಾಗಲೇ ಅವರು ಸಾವಿಗೀಡಾಗಿದ್ದರು.

ಭಾನುವಾರ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ವೈಲ್ಡ್ ಲೈಫ್ ಡಿಸಿಎಫ್ ತಹಸೀನಾಬಾನು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !