ಕಾಶ್ಮೀರ: ಬುದ್ಗಾಮ್ ಜಿಲ್ಲೆಯ ಮಜಮಾ ಪ್ರದೇಶದಲ್ಲಿ ಹಳಿ ತಪ್ಪಿದ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಕ್ರವಾರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಮಜಮಾ ಪ್ರದೇಶದಲ್ಲಿ ರೈಲು ಹಳಿತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

ಇಂದು ಬೆಳಗ್ಗೆ ಮಜಮಾ ನಿಲ್ದಾಣದಿಂದ ಬಾರಾಮುಲ್ಲಾಗೆ ರೈಲು ಹೊರಡುವಾಗ ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಬುಡ್ಗಾಮ್-ಬಾರಾಮುಲ್ಲಾ ಹಳಿಯಲ್ಲಿ ಕಿಮೀ ಸಂಖ್ಯೆ 85/7 ಮತ್ತು 85/8 ರಲ್ಲಿ ರೈಲು ಸಂಖ್ಯೆ 04483 ರ ಬೋಗಿಯು ಸ್ಕಿಡ್ ಆಗಿ ಬಿದ್ದಿದೆ ಎಂದು ಅವರು ಹೇಳಿದರು. “ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಮಜಮಾದಲ್ಲಿ ರೈಲನ್ನು ನಿಲ್ಲಿಸಲಾಗಿದೆ” ಎಂದು ಮಗಮ್ ತಹಸೀಲ್ದಾರ್ ಜಾಫರ್ ಅಹ್ಮದ್ ಲೋನ್ ತಿಳಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಬುದ್ಗಾಮ್-ಬಾರಾಮುಲ್ಲಾ ಹಳಿಯಲ್ಲಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!