ಪಾಕಿಸ್ತಾನದಲ್ಲಿ ರೈಲು ಹೈಜಾಕ್: ಪ್ರಯಾಣಿಕರನ್ನು ಒತ್ತೆಯಾಳಾಗಿಸಿದ ವಿಡಿಯೋ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಲೂಚಿಸ್ತಾನ ಲಿಬರೇಶನ್ ಆರ್ಮಿ ಪಾಕಿಸ್ತಾನದ ಪೇಶಾವರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ರೈಲನ್ನೇ ಹೈಜಾಕ್ ಮಾಡಿ ತೀವ್ರ ಆತಂಕ ಸೃಷ್ಟಿಸಿದೆ. ರೈಲಿನ ಮೇಲೆ ಬಾಂಬ್, ಗ್ರೇನೇಡ್ ದಾಳಿ ಮಾಡಿ ಬಳಿಕ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ.

ಸದ್ಯ ಪಾಕಿಸ್ತಾನ ಸೇನೆ 155 ಪ್ರಯಾಣಿಕರನ್ನು ರಕ್ಷಿಸಿದೆ. 27ಕ್ಕೂ ಹೆಟ್ಟು ಬಂಡುಕೋರರನ್ನು ಹೊಡೆದುರುಳಿಸಿದೆ. ಇದರ ನಡುವೆ BLA ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಿದೆ.

ರೈಲನ್ನು ಹೈಜಾಕ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ (BLA), ಹಳಿಗಳನ್ನು ಹೇಗೆ ಸ್ಫೋಟಿಸಿದರು, ದಾಳಿ ಹೇಗೆ ಮಾಡಿದರು ಮತ್ತು ಪ್ರಯಾಣಿಕರನ್ನು ಹೇಗೆ ಒತ್ತೆಯಾಳಾಗಿ ಇಟ್ಟುಕೊಂಡರು ಎಂಬುದನ್ನು ತೋರಿಸುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.

https://x.com/bahot_baluch/status/1899740261917331533?ref_src=twsrc%5Etfw%7Ctwcamp%5Etweetembed%7Ctwterm%5E1899740261917331533%7Ctwgr%5Ec6b84656560885870f17e47f7b66a1c80f22311d%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2Fbahot_baluch%2Fstatus%2F1899740261917331533%3Fref_src%3Dtwsrc5Etfw

400ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ರೈಲು ಹಳಿ ತಪ್ಪಿ ನಿಲ್ಲುವಂತೆ ಮೊದಲಿಗೆ ಸ್ಫೋಟಿಸಿದರು. ನಂತರ ಬಂಡುಕೋರರು ರೈಲಿಗೆ ನುಗ್ಗಿ ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡರು. ಗಾಯಗೊಂಡ ಚಾಲಕ ಬದುಕಲು ಹೋರಾಡಿದರೂ, ನಂತರ ಸಾವನ್ನಪ್ಪಿದರು. ಕ್ವೆಟ್ಟಾ ಮತ್ತು ಸಿಬಿಯ ನಡುವೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪಿಸಿರುವ ಬೋಲನ್‌ನ ಅಪಾಯಕಾರಿ ಪರ್ವತ ಪ್ರದೇಶದಲ್ಲಿ ಈ ದಾಳಿ ನಡೆಯಿತು.

ಪಾಕಿಸ್ತಾನದ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಕನಿಷ್ಠ 27 ಉಗ್ರರನ್ನು ಹೊಡೆದುರುಳಿಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ರಕ್ಷಣಾ ಕಾರ್ಯಾಚರಣೆಯಲ್ಲಿ 37 ಪ್ರಯಾಣಿಕರಿಗೆ ಗಾಯಗಳಾಗಿವೆ ಮತ್ತು ಅವರನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಸಾಗಿಸಲಾಯಿತು ಎಂದು ಭದ್ರತಾ ಮೂಲಗಳು ಖಚಿತಪಡಿಸಿವೆ.

ಏತನ್ಮಧ್ಯೆ, ಉಗ್ರರು ರೈಲಿನ ನಿಯಂತ್ರಣ ಸಾಧಿಸಿದ್ದ ಸುರಂಗಗಳ ಬಳಿ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬರುತ್ತಿವೆ. ಸೈನಿಕರು ಪ್ರದೇಶವನ್ನು ಸುತ್ತುವರೆದಿದ್ದು, ಉಳಿದ ಒತ್ತೆಯಾಳುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!