ಸಾರಿಗೆ ಸಂಸ್ಥೆಯ ಯಡವಟ್ಟು: ಕರ್ನಾಟಕ ರಾಜ್ಯ ಸಾರಿಗೆ ಟಿಕೆಟ್ ನಲ್ಲಿ ಮಹಾರಾಷ್ಟ್ರ ಮೊಹರು!

ಹೊಸದಿಗಂತ ವರದಿ, ಗದಗ:

ತಾಲ್ಲೂಕಿನ ಡಂಬಳ ಮಾರ್ಗವಾಗಿ ಸಂಚರಿಸುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬಲ್ಲಿ ಪ್ರಯಾಣಿಕರಿಗೆ ಜೈ ಮಹಾರಾಷ್ಟ್ರ ಎಂಬ ಮೊಹರಿನ ಟಿಕೆಟ್ ಹಂಚಿರುವದು ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಟಿಕೆಟ್ ನ ರೋಲ್ ನಲ್ಲಿ ಮಹಾರಾಷ್ಟ್ರ ರಾಜ್ಯ ಮೊಹರು ಹಾಗೂ ಮಹಾರಾಷ್ಟ್ರ ರಾಜ್ಯ ಪರಿವಾಹನ್ (ಮಹಾರಾಷ್ಟ್ರ ರಾಜ್ಯ ಸಾರಿಗೆ) ಎಂದು ಮುದ್ರಣಗೊಂಡಿದೆ. ಅಲ್ಲದೆ, ಜೈ ಮಹಾರಾಷ್ಟ್ರ ಎಂಬ ಮೊಹರು ಹೊಂದಿರಯವ ಟಿಕೆಟ್ ರೋಲ್ ಬಳಕೆಯಾಗಿದೆ. ಸಾರಿಗೆ ನಿರ್ವಾಹಕರಿಂದ ನಾಡ ಹಬ್ಬದ ದಿನವೇ ನಾಡಿಗೆ ಅಪಮಾನ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಮಹಾರಾಷ್ಟ್ರದ ರೋಲ್ ಬಳಸಿರುವ ನಿರ್ವಾಹಕ, ಡಿಪೋ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆಂಧ್ರದ ವಿಶಾಖಪಟ್ಟಣಂ ನಿಂದ ಟಿಕೆಟ್ ರೋಲ್ ಗಳು ಪ್ರಿಂಟ್ ಆಗಿ ಮಹಾರಾಷ್ಟ್ರ, ಕರ್ನಾಟಕಕ್ಕೆ ಪೂರೈಕೆಯಾಗುತ್ತೆ.. ಮಹಾರಾಷ್ಟ್ರ ಡಿಪೊಗೆ ಪೂರೈಕೆಯಾಗಬೇಕಿದ್ದ ಎರಡು ಬಾಕ್ಸ್ ಗಳು ಗದಗ ಡಿಪೊಗೆ ಬಂದಿವೆ.. ಒಟ್ಟು 10,200 ರೋಲ್ ಗಳನ್ನು ತರೆಸಲಾಗಿದೆ.. 200 ರೋಲ್ ಗಳು ಗದುಗಿಗೆ ಬಂದಿವೆ‌. ರೋಣ, ಗದಗ ಡಿಪೋ ಗಳಿಗೆ ಈ ರೋಲ್ ಗಳು ಹೋದ ಬಗ್ಗೆ ಮಾಹಿತಿ ಇದೆ.‌ ವಿಷಯ ತಿಳಿದ ನಂತರ ಮಹಾರಾಷ್ಟ್ರ ಮೊಹರು ಇರುವ ಟಿಕೆಟ್ ವಾಪಾಸ್ ಪಡೆಯಲು ನಿರ್ದೇಶನ ನೀಡಿದ್ದೇನೆ ಎಂದು ಸಾರಿಗೆ ಸಂಸ್ಥೆಯ ಡಿಸಿ ಮಾಹಿತಿ ನೀಡಿದ್ದಾರೆ..

ಸ್ಪಷ್ಟವಾಗಿ ದೇವನಾಗರಿ ಬರಹ ಇದ್ದರೂ ಗಮನಿಸದೇ ಬಳಸಿದ್ದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.. ಈ ರೀತಿಯ ಯಡವಟ್ಟುಗಳು ರಿಪೀಟ್ ಮುಂದೆ ಆಗದಿರಲಿ , ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!